ಕರ್ನಾಟಕ

karnataka

ETV Bharat / briefs

20 ವರ್ಷದ ಹಿಂದೆ ಕ್ಲೂಸ್ನರ್, ಇಂದು ಪಾಂಡ್ಯ... ಇಂತಹವರನ್ನ ತಡೆಯಲು ಯಾರಿಂದ್ಲೂ ಆಗಲ್ಲ! - ಲ್ಯಾನ್ಸ್ ಕ್ಲೂಸ್ನರ್

1999ರ ವಿಶ್ವಕಪ್​ನಲ್ಲಿ ಬ್ಯಾಟಿಂಗ್​ ಮತ್ತು ಬೌಲಿಂಗ್​ನಲ್ಲಿ ಅದ್ಭುತ ಪ್ರದರ್ಶನ ತೋರಿದ್ದ ದಕ್ಷಿಣ ಆಫ್ರಿಕಾದ ಆಲ್​ರೌಂಡರ್​ ಲಾನ್ಸ್​ ಕ್ಲೂಸ್ನರ್​ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು. 2019ರ ವಿಶ್ವಕಪ್​ನಲ್ಲಿ ಹಾರ್ದಿಕ್​ ಪಾಂಡ್ಯ ಕೂಡ ಅದೇ ರೀತಿ ಪ್ರದರ್ಶನ ನೀಡಲಿದ್ದಾರೆ, ಇವರನ್ನು ಯಾರಿಂದಲೂ ತಡೆಯಲೂ ಸಾಧ್ಯವಿಲ್ಲ ಎಂದು ವಾ ಭವಿಷ್ಯ ನುಡಿದಿದ್ದಾರೆ.

hardik

By

Published : Jun 11, 2019, 10:30 PM IST

ಲಂಡನ್​: ಆಸ್ಟ್ರೇಲಿಯಾ ವಿರುದ್ಧದ ವಿಶ್ವಕಪ್​ ಪಂದ್ಯದಲ್ಲಿ ಕೇವಲ 22 ಎಸೆತಗಳಲ್ಲಿ 48 ರನ್ ​ಗಳಿಸುವ ಮೂಲಕ ಭಾರತ ತಂಡದ ಬೃಹತ್​ ಮೊತ್ತಕ್ಕೆ ಕಾರಣರಾಗಿದ್ದ ಹಾರ್ದಿಕ್​ ಪಾಂಡ್ಯರನ್ನು 1999 ವಿಶ್ವಕಪ್​ನಲ್ಲಿ​ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದಿದ್ದ ಲಾನ್ಸ್​ ಕ್ಲೂಸ್ನರ್​ರಿಗೆ ಆಸೀಸ್​ ಮಾಜಿ ನಾಯಕ ಸ್ಟಿವ್​ ವಾ ಹೋಲಿಕೆ ಮಾಡಿದ್ದಾರೆ.

1999ರ ವಿಶ್ವಕಪ್​ನಲ್ಲಿ ಬ್ಯಾಟಿಂಗ್​ ಮತ್ತು ಬೌಲಿಂಗ್​ನಲ್ಲಿ ಅದ್ಭುತ ಪ್ರದರ್ಶನ ತೋರಿದ್ದ ದಕ್ಷಿಣ ಆಫ್ರಿಕಾದ ಆಲ್​ರೌಂಡರ್​ ಲಾನ್ಸ್​ ಕ್ಲೂಸ್ನರ್​ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು. 2019ರ ವಿಶ್ವಕಪ್​ನಲ್ಲಿ ಭಾರತ ತಂಡದ ಆಲ್​ರೌಂಡರ್​ ಹಾರ್ದಿಕ್​ ಪಾಂಡ್ಯ ಕೂಡ ಅದೇ ರೀತಿ ಪ್ರದರ್ಶನ ನೀಡಲಿದ್ದಾರೆ. ಇವರನ್ನು ಯಾರಿಂದಲೂ ತಡೆಯಲೂ ಸಾಧ್ಯವಿಲ್ಲ ಎಂದು ವಾ ಭವಿಷ್ಯ ನುಡಿದಿದ್ದಾರೆ.

ಸ್ಟಿವ್​ ವಾ- ಆಸೀಸ್​ ಮಾಜಿ ನಾಯಕ

ಹಾರ್ದಿಕ್​ ಪಾಂಡ್ಯ ಬ್ಯಾಟಿಂಗ್​ಗೆ ಬಂದರೆ ಸ್ಪಿನ್ನರ್​ಗಳನ್ನು ನಡುಗುವಂತೆ ಮಾಡುತ್ತಾರೆ. ಹಾರ್ದಿಕ್​ ಬಾಲ್​ಗಳನ್ನ ಸಿಕ್ಸರ್​ಗಟ್ಟುವುದನ್ನು ನೋಡಿದರೆ ಕ್ಲೂಸ್ನರ್​ ನೆನೆಪಿಗೆ ಬರುತ್ತಾರೆ ಎಂದು 20 ವರ್ಷದ ಹಿಂದಿನ ಘಟನೆಯನ್ನು ಐಸಿಸಿ ವೆಬ್​ಸೈಟ್​ಗೆ ಬರೆದಿರುವ ಲೇಖನದಲ್ಲಿ ಪಾಂಡ್ಯರನ್ನು ಗುಣಗಾಣ ಮಾಡಿದ್ದಾರೆ ವಾ.

1999 ವಿಶ್ವಕಪ್​ನಲ್ಲಿ ಲಾನ್ಸ್​ ಕ್ಲೂಸ್ನರ್​ 122.17 ರ ಸ್ಟ್ರೈಕ್​ ರೇಟ್​ನಲ್ಲಿ 281 ರನ್​ ಹಾಗೂ 17 ವಿಕೆಟ್​ ಪಡೆದು ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದಿದ್ದರು.

ಧೋನಿ ಆಟಕ್ಕೂ ಮೆಚ್ಚುಗೆ:

ಭಾರತ ತಂಡದ ಮಾಜಿ ನಾಯಕ ಎಂ.ಎಸ್​.ಧೋನಿಯನ್ನು ಮೆಚ್ಚಿಕೊಂಡಿರುವ ಸ್ಟಿವ್​ ವಾ, ಕೊನೆಯ ಓವರ್​ಗಳಲ್ಲಿ ಧೋನಿ ಉತ್ತಮವಾಗಿ ಆಡುತ್ತಾರೆ. ಅವರು ಕೊನೆಯ ಓವರ್​ಗಳಲ್ಲಿ ವಿಫಲವಾಗುವುದು ತುಂಬಾ ಕಡಿಮೆ. ಆಸ್ಟ್ರೇಲಿಯಾ ವಿರುದ್ಧವೂ 350 ರನ್​ಗಳ ಗಡಿ ದಾಟಲು ಅವರೇ ಕಾರಣರಾಗಿದ್ದರು ಎಂದು 14 ಎಸೆತಗಳಲ್ಲಿ 27 ರನ್ ​ಗಳಿಸಿದ್ದ ಧೋನಿಯನ್ನು ಹೊಗಳಿದ್ದಾರೆ.

ABOUT THE AUTHOR

...view details