ಕರ್ನಾಟಕ

karnataka

ETV Bharat / briefs

ಮಹಿಳಾ ಐಪಿಎಲ್​ ... ಮೊದಲ ಪಂದ್ಯದಲ್ಲಿ ಮಂದಾನ- ಕೌರ್​ ಪಡೆ ಮುಖಾಮುಖಿ

ಪುರುಷರ ಐಪಿಎಲ್​ ಪ್ರಪಂಚದ ಎಲ್ಲಾ ಲೀಗ್​ಗಳಿಗಿಂತ ಹೆಚ್ಚು ಪ್ರಸಿದ್ದಿ ಪಡೆದಿರುವ ಹಿನ್ನಲೆಯಲ್ಲಿ ಮಹಿಳಾ ಐಪಿಎಲ್​ ಶುರುಮಾಡುವ ಆಲೋಚನೆಯಲ್ಲಿರುವ ಬಿಸಿಸಿಐ, ಪ್ರಾಯೋಗಿಕವಾಗಿ 3 ತಂಡಗಳ ಮಿನಿ ಐಪಿಎಲ್​ ನಡೆಸುತ್ತಿದೆ.

ipl

By

Published : May 6, 2019, 4:25 PM IST

ಜೈಪುರ:ಭಾರತ ಮಹಿಳಾ ತಂಡದ ಇಬ್ಬರ ಸೂಪರ್​ ಸ್ಟಾರ್​ಗಳಾದ ಹರ್ಮನ್​ಪ್ರೀತ್​ ಕೌರ್​ ಹಾಗೂ ಸ್ಮೃತಿ ಮಂದಾನ ನೇತೃತ್ವದ ಸೂಪರ್​ನೊವಾಸ್​ ಹಾಗೂ ಟ್ರೈಲ್​ಬ್ಲೇಜರ್ಸ್ ತಂಡಗಳು ಇಂದು ಮಹಿಳಾ ಐಪಿಎಲ್​ ಟೂರ್ನಿಯ ಮೊದಲ ಪಂದ್ಯದಲ್ಲಿ ಮುಖಾಮುಖಿಯಾಗುತ್ತಿವೆ.

​ಮೂರು ತಂಡಗಳಿರುವ ಈ ಚುಟುಕು ಟೂರ್ನಿಯಲ್ಲಿ ಮೂರು ತಂಡಗಳು ತಲಾ ಎರಡು ಪಂದ್ಯವಾಡಲಿವೆ. ಎಲ್ಲಾ ಪಂದ್ಯಗಳು ಜೈಪುರದ ಸವಾಯಿ ಮಾನ್ ಸಿಂಗ್ ಕ್ರೀಡಾಂಗಣದಲ್ಲಿ ಆಯೋಜನೆಗೊಂಡಿವೆ. ಈ ಎರಡೂ ತಂಡಗಳ ಜೊತೆಗೆ ಮತ್ತೊಬ್ಬ ಹಿರಿಯ ಆಟಗಾರ್ತಿಯಾದ ಮಿಥಾಲಿ ರಾಜ್ ನೇತೃತ್ವದಲ್ಲಿ ವೆಲಾಸಿಟಿ ತಂಡ ಸ್ಪರ್ಧೆಯಲ್ಲಿದೆ. ಮಹಿಳಾ ಐಪಿಎಲ್​ಗೆ ಭಾರತ ಸೇರಿದಂತೆ ವಿವಿಧ ದೇಶಗಳ ಮಹಿಳಾ ಕ್ರಿಕೆಟರ್​ಗಳು ಭಾಗವಹಿಸಿಲಿದ್ದಾರೆ.

ಟೂರ್ನಿಯಲ್ಲಿ ಇಂಗ್ಲೆಂಡ್​, ವೆಸ್ಟ್​ ಇಂಡೀಸ್​, ಶ್ರೀಲಂಕಾ ತಂಡದ ಆಟಗಾರ್ತಿಯರು ಭಾಗವಹಿಸಲಿದ್ದಾರೆ.

ಸೂಪರ್​ನೊವಾಸ್​:

ಹರ್ಮನ್​ ಪ್ರೀತ್​ ಕೌರ್​(ನಾಯಕಿ), ಅನುಜಾ ಪಾಟೀಲ್​,ಅರುಂಧತಿ ರೆಡ್ಡಿ,ಜಮೈಮಾ ರೋಡ್ರಿಗಸ್​, ಮಾನ್ಸಿ ಜೋಷಿ, ಪೂನಮ್​ ಯಾದವ್​, ಪ್ರಿಯ ಪೂನಿಯಾ, ರಾಧಾ ಯಾದವ್​, ತನಿಯಾ ಭಾಟಿಯಾ, ಸೋಫಿಯಾ ಡಿವೈನ್​, ನಟಿಲಿ ಸಿವರ್​, ಚಾಮರಿ ಅಟಪಟ್ಟು, ಲಿಯಾ ತಹುಹು

ಟ್ರೈಬ್ಲಾಜರ್ಸ್​:

ಸ್ಮೃತಿ ಮಂದಾನ(ನಾಯಕಿ), ಭಾರತಿ ಫುಲ್ಮಾಲಿ, ದಯಾಳನ್ ಹೇಮಲತಾ, ದೀಪ್ತಿ ಶರ್ಮಾ, ಹರ್ಲೀನ್​ ಡಿಯೋಲ್​,ಜಸಿಯಾ ಅಖ್ತರ್​, ಜುಲಾನ್ ಗೋಸ್ವಾಮಿ, ಆರ್​ ಕಲ್ಪನಾ, ರಾಜೇಶ್ವರಿ ಗಾಯಕವಾಡ, ​ ಸೂಜಿ ಬೇಟ್ಸ್​, ಸ್ಟೆಫನಿ ಟಾಯ್ಲರ್​, ಸೋಫಿಯಾ ಎಕ್​ಲೆಸ್ಟೋನ್​, ಶಕೇರಾ ಸೆಲ್ಮಾ

ABOUT THE AUTHOR

...view details