ಬೆಂಗಳೂರು: ನಗರದ ಸುಬ್ರಮಣ್ಯಪುರದ ದೊಡ್ಡ ಕಲ್ಲಸಂದ್ರದ ಮನೆಯೊಂದರಲ್ಲಿ ಒಂಟಿ ಮಹಿಳೆಯನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಒಂಟಿ ಮಹಿಳೆಯ ಬರ್ಬರ ಹತ್ಯೆ... ರಾಜಧಾನಿಯಲ್ಲಿ ತಡವಾಗಿ ಬೆಳಕಿಗೆ ಬಂದ ಪ್ರಕರಣ - ಬೆಂಗಳೂರು
ಭಾಗ್ಯಮ್ಮಕೊಲೆಯಾದ ಮಹಿಳೆ. ಸುಬ್ರಮಣ್ಯಪುರದ ದೊಡ್ಡ ಕಲ್ಲಸಂದ್ರದ ಮನೆಯಲ್ಲಿ ಭಾಗ್ಯಮ್ಮ ವಾಸವಾಗಿದ್ದಳು.
ಭಾಗ್ಯಮ್ಮಕೊಲೆಯಾದ ಮಹಿಳೆ. ಸುಬ್ರಮಣ್ಯಪುರದ ದೊಡ್ಡ ಕಲ್ಲಸಂದ್ರದ ಮನೆಯಲ್ಲಿ ಭಾಗ್ಯಮ್ಮ ವಾಸವಾಗಿದ್ದಳು. ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಭಾಗ್ಯಮ್ಮಳನ್ನು ದುಷ್ಕರ್ಮಿಗಳು ಕೊಲೆ ಮಾಡಿ ಹೋಗಿದ್ದಾರೆ. ಕೊಳೆತು ದುರ್ವಾಸನೆ ಬಂದ ಹಿನ್ನೆಲೆಯಲ್ಲಿ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಸ್ಥಳಕ್ಕೆ ಬಂದ ಸುಬ್ರಮಣ್ಯಪುರ ಪೊಲೀಸರು ಪರಿಶೀಲನೆ ನಡೆಸಿದಾಗ ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಪೊಲೀಸರು ಮೃತದೇಹವನ್ನ ಮರಣೋತ್ತರ ಪರೀಕ್ಷೆಗಾಗಿ ಕೆಂಪೇಗೌಡ ಆಸ್ಪತ್ರೆಗೆ ರವಾನಿಸಿದ್ದಾರೆ. ಸುಬ್ರಮಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.