ಕರ್ನಾಟಕ

karnataka

ETV Bharat / briefs

ಅನುಮಾನಾಸ್ಪದವಾಗಿ ಮಹಿಳೆ ಸಾವು: ವರದಕ್ಷಿಣೆ ಕಿರುಕುಳ ಶಂಕೆ - tumkur latest news

ತುಮಕೂರಲ್ಲಿ ಗೃಹಿಣಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾಳೆ. ಸಕಲೇಶಪುರ ಮೂಲದ ಯುವತಿಯನ್ನು ಕುಣಿಗಲ್ ತಾಲೂಕಿನ ಕಾವೇರಿಪುರದ ನಾಗರಾಜ್ ಎಂಬಾತ ಮದುವೆಯಾಗಿದ್ದ. ಆಗಿನಿಂದ ವರದಕ್ಷಿಣೆ ತೆಗೆದುಕೊಂಡು ಬಾ ಎಂದು ಕಿರುಕುಳ ನೀಡುತ್ತಿದ್ದ ಎಂಬ ಆರೋಪ ಕೇಳಿಬಂದಿದೆ.

 woman suspicious death in tumkur
woman suspicious death in tumkur

By

Published : Jun 10, 2021, 10:30 PM IST

ತುಮಕೂರು: ಒಂದು ವರ್ಷದ ಹಿಂದಷ್ಟೆ ಮದುವೆಯಾಗಿದ್ದ ಯುವತಿ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ನಗರದಲ್ಲಿ ನಡೆದಿದೆ. ವರದಕ್ಷಿಣೆ ಕಿರುಕುಳದಿಂದ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.

ಸೌಂದರ್ಯ (19) ಮೃತಪಟ್ಟಿರುವ ಮಹಿಳೆ. ಹಾಸನ ಜಿಲ್ಲೆಯ ಸಕಲೇಶಪುರ ಮೂಲದವರಾಗಿರುವ ಸೌಂದರ್ಯ ಅವರನ್ನು ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಕಾವೇರಿಪುರದ ನಾಗರಾಜ್ ಮದುವೆಯಾಗಿದ್ದ.

ಮದುವೆಯಾದಾಗಿನಿಂದಲೂ ವರಕ್ಷಿಣೆ ತರುವಂತೆ ನಾಗರಾಜ್ ಪತ್ನಿಯನ್ನು ಪೀಡಿಸುತ್ತಿದ್ದನು ಎಂದು ತಿಳಿದುಬಂದಿದೆ. ಈ ಕುರಿತಂತೆ ಅನೇಕ ಬಾರಿ ಸೌಂದರ್ಯ ತನ್ನ ಪೋಷಕರಿಗೆ ತಿಳಿಸಿದ್ದಳು. ಹೀಗಾಗಿ ವರದಕ್ಷಿಣೆ ಕಿರುಕುಳದಿಂದಲೇ ಈಕೆ ಮೃತಪಟ್ಟಿದ್ದು, ಪತಿಯೇ ಈಕೆಯನ್ನು ಕೊಲೆ ಮಾಡಿದ್ದಾನೆ ಎಂದು ಪೋಷಕರು ಆರೋಪಿಸಿದ್ದಾರೆ.

ತುಮಕೂರಿನ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details