ಮುಂಬೈ: ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ರೋಚಕ ಗೆಲುವು ದಾಖಲು ಮಾಡಿರುವ ಮುಂಬೈ ಇಂಡಿಯನ್ಸ್ ಪ್ರಸಕ್ತ ಸಾಲಿನ ಐಪಿಎಲ್ ಟ್ರೋಫಿಗೆ ಮುತ್ತಿಕ್ಕಿದೆ. ಆದರೆ ತಂಡದ ಯಾವುದೇ ಆಟಗಾರ ಆರೆಂಜ್ ಹಾಗೂ ಪರ್ಪಲ್ ಕ್ಯಾಪ್ ಪಡೆದುಕೊಂಡಿಲ್ಲ ಎಂಬುದು ಗಮನಾರ್ಹ.
'ಪರ್ಪಲ್, ಆರೆಂಜ್ ಕ್ಯಾಪ್ ಯಾರಿಗೆಬೇಕು, ಟ್ರೋಫಿಯನ್ನೇ ನಾವ್ ಗೆದ್ದಾಯ್ತು': ಜಯವರ್ಧನೆ - ಜಯವರ್ಧನೆ
ಪ್ರಸಕ್ತ ಸಾಲಿನ ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ರೋಚಕ ಗೆಲುವು ದಾಖಲು ಮಾಡಿ, ಟ್ರೋಫಿಗೆ ಮುತ್ತಿಕ್ಕಿದೆ.
ಇದೇ ವಿಷಯವಾಗಿ ಮುಂಬೈ ಇಂಡಿಯನ್ಸ್ ಕೋಚ್ ಮಹೇಲಾ ಜಯವರ್ಧನೆ ಮಾತನಾಡಿದ್ದು, ಪರ್ಪಲ್, ಆರೆಂಜ್ ಕ್ಯಾಪ್ ಬಗ್ಗೆ ಯಾರು ತಲೆ ಕೆಡಿಸಿಕೊಳ್ಳುತ್ತಾರೆ. ನಾವು ಟ್ರೋಫಿಯನ್ನೇ ಗೆದ್ದಾಗಿದೆ ಎಂದು ಹೇಳಿದ್ದಾರೆ. ತಂಡವನ್ನುದ್ದೇಶಿಸಿ ಮಾತನಾಡುತ್ತಿದ್ದ ವೇಳೆ ಜಯವರ್ಧನೆ, ಇಂದಿನ ದಿನವನ್ನ ಮರೆಯಲು ಸಾಧ್ಯವಿಲ್ಲ. ಪಂದ್ಯದಲ್ಲಿ ನಾವು ತಪ್ಪು ಮಾಡಿದ್ದೇವೆ. ಆದರೆ, ಅದರಿಂದ ಪಾಠ ಕಲಿತುಕೊಂಡಿರುವ ಫಲವೇ ಟ್ರೋಫಿ ಗೆಲುವಿಗೆ ಮುಖ್ಯ ಕಾರಣವಾಯಿತು. ಪ್ರಸಕ್ತ ಸಾಲಿನ ಟೂರ್ನಿಯಲ್ಲಿ ಪ್ರಶಸ್ತಿ ಗೆಲುವಿಗೆ ತಂಡದ ಪ್ರತಿಯೊಬ್ಬ ಸದಸ್ಯರ ಸಪೋರ್ಟ್ ಇದೆ ಎಂದು ತಿಳಿಸಿದರು.
ಪ್ರಸಕ್ತ ಸಾಲಿನ ಐಪಿಎಲ್ನಲ್ಲಿ ಸಿಎಸ್ಕೆ ತಂಡದ ಇಮ್ರಾನ್ ತಾಹೀರ್ ಪರ್ಪಲ್ ಕ್ಯಾಪ್ ಪಡೆದುಕೊಂಡಿದ್ದರೆ, ಸನ್ರೈಸರ್ಸ್ ಹೈದರಾಬಾದ್ ತಂಡದ ಡೇವಿಡ್ ವಾರ್ನರ್ ಆರೆಂಜ್ ಕ್ಯಾಪ್ ಪಡೆದು ಕೊಂಡಿದ್ದಾರೆ.