ರಾಂಚಿ: ಟೀಂ ಇಂಡಿಯಾದ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಅವರ ಮನೆಗೆ ಮತ್ತೊಬ್ಬ ಹೊಸ ಅತಿಥಿ ಬಂದಿದ್ದಾರೆ. ಮಾಹಿ ಈ ಬಾರಿ ಬಿಳಿ ಕುದುರೆಯನ್ನು ಖರೀದಿಸಿದ್ದಾರೆ. ಸಾಕ್ಷಿ ಸಿಂಗ್ ಧೋನಿ ತನ್ನ ಮಗಳು ಝೀವಾ ಜೊತೆ ಬಿಳಿ ಕುದುರೆಯ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
ಮಾಹಿ ಮನೆಗೆ ಬಂದ ಹೊಸ ಅತಿಥಿ: ಮಗಳು ಝೀವಾ ಜೊತೆ ಇರುವ ಗೆಸ್ಟ್ ಇವರೇ ನೋಡಿ! - ಜೀವಾ ಧೋನಿ
ಟೀಂ ಇಂಡಿಯಾದ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಬಿಳಿ ಕುದುರೆಯನ್ನು ಸಾಕುತ್ತಿದ್ದಾರೆ. ಸಾಕ್ಷಿ ಸಿಂಗ್ ಧೋನಿ ತನ್ನ ಮಗಳು ಝೀವಾ ಜೊತೆ ಬಿಳಿ ಕುದುರೆಯ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
ಕೆಲವು ದಿನಗಳ ಹಿಂದೆ, ಮಹೇಂದ್ರ ಸಿಂಗ್ ಧೋನಿ ಕಪ್ಪು ಬಣ್ಣದ ಕುದುರೆಯೊಂದನ್ನು ಖರೀದಿಸಿದ್ದರು. ಅದ ಹೆಸರು ಚೇತಕ್. ಮಾಹಿ ತನ್ನ ತೋಟದ ಮನೆಯಲ್ಲಿ ಕುದುರೆಯೊಂದಿಗೆ ಸಾಕಷ್ಟು ಸಮಯ ಕಳೆಯುತ್ತಿರುವುದು ಸಖತ್ ಸುದ್ದಿಯಾಗಿತ್ತು. ಇತ್ತೀಚೆಗೆ ಒಂದು ವಿಡಿಯೋ ಕೂಡ ವೈರಲ್ ಆಗಿದ್ದು, ಇದರಲ್ಲಿ ಮಹೇಂದ್ರ ಸಿಂಗ್ ಧೋನಿ ಅವರ ಕುದುರೆ ಚೇತಕ್‌ಗೆ ಮಸಾಜ್ ಮಾಡುತ್ತಿರುವುದು ಕಂಡು ಬಂದಿದೆ.
ಈಗ ಮತ್ತೊಂದು ಫೋಟೋ ಹೆಚ್ಚು ವೈರಲ್ ಆಗುತ್ತಿದ್ದು, ಸಾಕ್ಷಿ ಸಿಂಗ್ ಧೋನಿ ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಚಿತ್ರದಲ್ಲಿ, ಝೀವಾ ಸಣ್ಣ ಬಿಳಿ ಕುದುರೆಯೊಂದಿಗೆ ನಿಂತಿರುವುದನ್ನು ನೋಡಬಹುದು.