ಹೈದರಾಬಾದ್:ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಮಾತು ಇತ್ತೀಚಿನ ದಿನದಲ್ಲಿ ಬಾಲಿವುಡ್ ಅಂಗಳದಲ್ಲಿ ಕೇಳಿ ಬರುತ್ತಿದೆ. ಇದೀಗ ಈ ಬಗ್ಗೆ ನಟ ಹರ್ಷವರ್ಧನ್ ಕಪೂರ್ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.
ಹರ್ಷ್ ವರ್ಧನ್ ಕಪೂರ್ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಬಾಲಿವುಡ್ಗೆ ಸಂಬಂಧಿಸಿದ ವದಂತಿಯನ್ನು ಬಹಿರಂಗಪಡಿಸಲು ಕೇಳಲಾಯಿತು. ಆಗ ವಿಕ್ಕಿ ಮತ್ತು ಕತ್ರಿನಾ ಬಗ್ಗೆ ಉತ್ತರಿಸಿದ ಅವರು 'ಅವರಿಬ್ಬರು ಒಟ್ಟಿಗೆ ಇದ್ದಾರೆ, ಅದು ನಿಜ. ಆದರೆ, ಇದನ್ನು ಹೇಳಿದ್ದಕ್ಕಾಗಿ ನಾನು ತೊಂದರೆಯಲ್ಲಿ ಸಿಲುಕಲಿದ್ದೇನೆ? ನನಗೆ ಗೊತ್ತಿಲ್ಲ, ಅವರು ಇದರ ಬಗ್ಗೆ ಸಾಕಷ್ಟು ಮುಕ್ತರಾಗಿದ್ದಾರೆಂದು ನಾನು ಭಾವಿಸುತ್ತೇನೆ" ಎಂದು ಹೇಳಿದರು.