ಕರ್ನಾಟಕ

karnataka

ETV Bharat / briefs

ಮತ್ತೆ ಬೇಲ್ ನಿರಾಕರಿಸಿದ ಕೋರ್ಟ್​... ನೀರವ್ ಮೋದಿಗೆ ಜೈಲೇ ಗತಿ..! - ಬೇಲ್

ಮಾರ್ಚ್​ 19ರಂದು ಸ್ಕಾಟ್ಲಂಡ್ ಯಾರ್ಡ್​ ಪೊಲೀಸರು ನೀರವ್ ಮೋದಿಯನ್ನು ಬ್ಯಾಂಕ್ ಖಾತೆ ತೆರೆಯಲು ಬ್ಯಾಂಕ್​ಗೆ ಆಗಮಿಸಿದ್ದ ವೇಳೆ ಬಂಧಿಸಿದ್ದರು.

ನೀರವ್ ಮೋದಿ

By

Published : May 8, 2019, 10:40 PM IST

ಲಂಡನ್​​: ಪಂಜಾಬ್ ನ್ಯಾಷನಲ್​ ಬ್ಯಾಂಕ್​​ಗೆ ಹದಿಮೂರು ಸಾವಿರ ಕೋಟಿ ವಂಚನೆ ಎಸೆಗಿ ದೇಶ ತೊರೆದಿರುವ ವಜ್ರದ ವ್ಯಾಪಾರಿ ನೀರವ್ ಮೋದಿಗೆ ಲಂಡನ್​ನ ವೆಸ್ಟ್​​ ಮಿನ್​​ಸ್ಟರ್​ ಕೋರ್ಟ್​ ಮತ್ತೆ ಜಾಮೀನು ನಿರಾಕರಿಸಿದೆ.

ಮಾರ್ಚ್​ 19ರಂದು ಸ್ಕಾಟ್ಲಂಡ್ ಯಾರ್ಡ್​ ಪೊಲೀಸರು ನೀರವ್ ಮೋದಿಯನ್ನು ಬ್ಯಾಂಕ್ ಖಾತೆ ತೆರೆಯಲು ಬ್ಯಾಂಕ್​ಗೆ ಆಗಮಿಸಿದ್ದ ವೇಳೆ ಬಂಧಿಸಿದ್ದರು.

ಈಗಾಗಲೇ ಎರಡು ಬಾರಿ ಬೇಲ್​ ನಿರಾಕರಿಸಿರುವ ಕೋರ್ಟ್​ ಇಂದು ಮೂರನೇ ಬಾರಿ ಬೇಲ್ ನೀಡಲು ಸಾಧ್ಯವಿಲ್ಲ ಎಂದಿದೆ. ಈ ಮೂಲಕ ವಜ್ರದ ವ್ಯಾಪಾರಿ ಮತ್ತೆ ಕಂಬಿ ಎಣಿಸೋದು ಖಾಯಂ ಆಗಿದೆ.

ನೀರವ್​ ಮೋದಿಯ ಮುಂದಿನ ವಿಚಾರಣೆ ಮೇ 30ರಂದು ನಡೆಯಲಿದೆ ಎಂದು ವೆಸ್ಟ್​ಮಿನ್​​ಸ್ಟರ್​​​​​ ಕೋರ್ಟ್​ ತಿಳಿಸಿದೆ.

ABOUT THE AUTHOR

...view details