ಕರ್ನಾಟಕ

karnataka

ETV Bharat / briefs

ಮೋದಿ ಸಂಪುಟದಿಂದ ಹೊರಗುಳಿದ ಸುಷ್ಮಾ,ಭಾವುಕರಾದ ನೆಟಿಜನ್ಸ್! - ನವದೆಹಲಿ

2014ರಲ್ಲಿ ಮೋದಿ ಪ್ರಧಾನಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ದಿನದಂದೇ ಸುಷ್ಮಾ ಸ್ವರಾಜ್​ ಸಂಪುಟ ಸೇರಿದ್ದರು. ಅಂತರಾಷ್ಟ್ರೀಯ ಮಟ್ಟದಲ್ಲಿ ಕಳೆದ ಐದು ವರ್ಷಗಳಲ್ಲಿ ಪಾಕಿಸ್ತಾನದ ನಿಲುವುಗಳನ್ನು ಖಂಡಿಸುತ್ತಾ ಭಾರತದ ಘನತೆಯನ್ನು ಎತ್ತರಿಸುವ ಕೆಲಸವನ್ನು ಅವರು ಯಶಸ್ವಿಯಾಗಿ ಮಾಡಿದ್ದರು.

ಸುಷ್ಮಾ ಸ್ವರಾಜ್

By

Published : May 31, 2019, 3:18 PM IST

Updated : May 31, 2019, 4:50 PM IST

ನವದೆಹಲಿ:ಪ್ರಧಾನಿ ಮೋದಿ ಸಂಪುಟದಲ್ಲಿ ವಿದೇಶಾಂಗ ವ್ಯವಹಾರಗಳ ಖಾತೆಯನ್ನು ಸಮರ್ಥವಾಗಿ ನಿಭಾಯಿಸಿದ್ದ ಸುಷ್ಮಾ ಸ್ವರಾಜ್​​ ಹಾಲಿ ಸಂಪುಟದಿಂದ ಹೊರಗುಳಿದಿದ್ದಾರೆ.

ಅನಾರೋಗ್ಯ ಕಾರಣದಿಂದ ಸುಷ್ಮಾ ತಾವೇ ಸಚಿವ ಸ್ಥಾನದಿಂದ ಹಿಂದೆ ಸರಿದಿದ್ದು ಈ ನಿರ್ಧಾರಕ್ಕೆ ನೆಟಿಜನ್ಸ್ ಬೇಸರಗೊಂಡಿದ್ದಾರೆ. ವಿವಿಧ ರೀತಿಯ ಪೋಸ್ಟ್‌ಗಳ ಮೂಲಕ ಸುಷ್ಮಾ ಸ್ವರಾಜ್​​ಗೆ ಧನ್ಯವಾದ ಸಲ್ಲಿಸಿದ್ದಾರೆ.

2014ರಲ್ಲಿ ಮೋದಿ ಪ್ರಧಾನಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ದಿನದಂದೇ ಸುಷ್ಮಾ ಸ್ವರಾಜ್​ ಸಂಪುಟಸೇರಿದ್ದರು. ಕಳೆದ ಐದು ವರ್ಷದಲ್ಲಿ ಪಾಕಿಸ್ತಾನದ ನಿಲುವುಗಳನ್ನು ಖಂಡಿಸುತ್ತಾ ಭಾರತದ ಘನತೆಯನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಎತ್ತರಿಸುವ ಕೆಲಸ ಮಾಡಿದ್ದರು.

ಕಳೆದ ಐದು ವರ್ಷದಲ್ಲಿ ವಿದೇಶಾಂಗ ಖಾತೆ ನಿಭಾಯಿಸಲು ಅವಕಾಶ ನೀಡಿರುವುದಕ್ಕೆ ಸುಷ್ಮಾ​​, ಪ್ರಧಾನಿ ಮೋದಿಗೆ ಟ್ವೀಟ್ ಮೂಲಕ ಧನ್ಯವಾದ ಸಲ್ಲಿಸಿದ್ದಾರೆ. ಮತ್ತೆ ಅಧಿಕಾರಕ್ಕೇರಿರುವ ಎನ್​ಡಿಎ ಸರ್ಕಾರಕ್ಕೆ ಶುಭವಾಗಲಿ ಎಂದು ಹಾರೈಸಿದ್ದಾರೆ.

Last Updated : May 31, 2019, 4:50 PM IST

ABOUT THE AUTHOR

...view details