ಕರ್ನಾಟಕ

karnataka

ETV Bharat / briefs

ಮೋದಿಯ ದ್ವೇಷದ ರಾಜಕಾರಣದಲ್ಲಿ ಕಾಂಗ್ರೆಸ್​ನ ಪ್ರೀತಿಯೇ ಗೆಲ್ಲಲಿದೆ: ರಾಗಾ ವಿಶ್ವಾಸ - ಲೋಕಸಭಾ ಚುನಾವಣೆ

ಮೋದಿ ಪ್ರಚಾರದ ವೇಳೆ ದ್ವೇಷವನ್ನೇ ದಾಳವಾಗಿಸಿಕೊಂಡಿದ್ದಾರೆ. ಆದರೆ ನಾವು ಪ್ರೀತಿಯನ್ನು ನೀಡಿದ್ದೇವೆ, ಈ ಪ್ರೀತಿಯೇ ಗೆಲ್ಲಲಿದೆ ಎನ್ನುವ ವಿಶ್ವಾಸವಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ರಾಗಾ

By

Published : May 12, 2019, 11:23 AM IST

ನವದೆಹಲಿ:ಈ ಬಾರಿಯ ಲೋಕಸಭಾ ಚುನಾವಣೆ ನೋಟ್​ಬ್ಯಾನ್​​, ರೈತರ ಸಮಸ್ಯೆ, ಗಬ್ಬರ್ ಟ್ಯಾಕ್ಸ್(ಜಿಎಸ್​​ಟಿ) ಹಾಗೂ ರಫೇಲ್​​ ಹಗರಣದ ಮೇಲೆ ನಡೆಯುತ್ತಿದೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.

ದೆಹಲಿಯ ಔರಂಗಜೇಬ್​​​ ಲೇನ್​​​​ನಲ್ಲಿ ಮತದಾನ ಮಾಡಿದ ನಂತರ ಮಾಧ್ಯಮದ ಜೊತೆಗೆ ಮಾತನಾಡಿದ ರಾಗಾ, ಮೋದಿ ಪ್ರಚಾರದ ವೇಳೆ ದ್ವೇಷವನ್ನೇ ದಾಳವಾಗಿಸಿಕೊಂಡಿದ್ದಾರೆ. ಆದರೆ ನಾವು ಪ್ರೀತಿಯನ್ನು ನೀಡಿದ್ದೇವೆ, ಈ ಪ್ರೀತಿಯೇ ಗೆಲ್ಲಲಿದೆ ಎನ್ನುವ ವಿಶ್ವಾಸವಿದೆ ಎಂದಿದ್ದಾರೆ.

ಮಾಧ್ಯಮದ ಜೊತೆಗೆ ಮಾತನಾಡಿದ ರಾಹುಲ್ ಗಾಂಧಿ

ಏಳು ರಾಜ್ಯಗಳ 59 ಕ್ಷೇತ್ರಗಳಲ್ಲಿ ಇಂದು ಆರನೇ ಹಂತದ ಮತದಾನ ನಡೆಯುತ್ತಿದ್ದು ಪ್ರಮುಖ ಗಣ್ಯರು ಮತಗಟ್ಟೆಗೆ ಆಗಮಿಸಿ ಹಕ್ಕು ಚಲಾಯಿಸುತ್ತಿದ್ದಾರೆ.

ABOUT THE AUTHOR

...view details