ಅಸನ್ಸೋಲ್ (ಪಶ್ಚಿಮ ಬಂಗಾಳ):ಈಸ್ಟರ್ನ್ ಕೋಲ್‌ಫೀಲ್ಡ್ಸ್ ಲಿಮಿಟೆಡ್‌ನ (ಇಸಿಎಲ್) ನರ್ಸೊಮುಡಾದಲ್ಲಿ ಕಲ್ಲಿದ್ದಲು ಗಣಿಗಾರಿಕೆ ವೇಳೆ ಶನಿವಾರ ಬೆಳಗ್ಗೆ ಭಾರೀ ಪ್ರಮಾಣದಲ್ಲಿ ನೀರು ಹರಿದು ಬಂದಿದೆ.
ಕಲ್ಲಿದ್ದಲು ಗಣಿಗೆ ಇದ್ದಕ್ಕಿದ್ದಂತೆ ಹರಿದು ಬಂದ ನೀರು : ಕಾರ್ಮಿಕರ ಸ್ಥಳಾಂತರ - ಕಲ್ಲಿದ್ದಲು ಗಣಿಗೆ ಇದ್ದಕ್ಕಿದ್ದಂತೆ ಹರಿದು ಬಂದ ನೀರಿನಿಂದಾಗಿ ಕಾರ್ಮಿಕರ ಸ್ಥಳಾಂತರ
ಸದ್ಯಕ್ಕೆ ಗಣಿ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ ಮತ್ತು ಗಣಿಗಾರಿಕೆ ಕಾರ್ಯಾಚರಣೆಗಳು ಯಾವಾಗ ಪುನಾರಂಭಗೊಳ್ಳುತ್ತವೆ ಎಂಬುವುದು ಇನ್ನೂ ಕೂಡ ಖಚಿತಗೊಂಡಿಲ್ಲ..
![ಕಲ್ಲಿದ್ದಲು ಗಣಿಗೆ ಇದ್ದಕ್ಕಿದ್ದಂತೆ ಹರಿದು ಬಂದ ನೀರು : ಕಾರ್ಮಿಕರ ಸ್ಥಳಾಂತರ mine](https://etvbharatimages.akamaized.net/etvbharat/prod-images/768-512-09:15:53:1624117553-12192543-dfkljsd.jpg)
mine
ಪಕ್ಕದ ಅಕ್ರಮ ಕಲ್ಲಿದ್ದಲು ಗಣಿಯಿಂದ ನೀರು ವೇಗವಾಗಿ ಹರಿದು ಬಂದಿದೆ ಎಂದು ಹೇಳಲಾಗುತ್ತಿದೆ. ಎಲ್ಲಾ ಕಾರ್ಮಿಕರನ್ನು ಶೀಘ್ರವಾಗಿ ಸ್ಥಳಾಂತರಿಸಲಾಯಿತು ಮತ್ತು ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಅಥವಾ ಗಾಯಗಳು ವರದಿಯಾಗಿಲ್ಲ.
ಸದ್ಯಕ್ಕೆ ಗಣಿ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ ಮತ್ತು ಗಣಿಗಾರಿಕೆ ಕಾರ್ಯಾಚರಣೆಗಳು ಯಾವಾಗ ಪುನಾರಂಭಗೊಳ್ಳುತ್ತವೆ ಎಂಬುವುದು ಇನ್ನೂ ಕೂಡ ಖಚಿತಗೊಂಡಿಲ್ಲ.