ರಾಂಚಿ:ಪಂಜಾಬ್ ವಿರುದ್ಧ ಪಂದ್ಯ ಮುಗಿಯುತ್ತಿದ್ದಂತೆ ತವರಿಗೆ ಮರಳಿರುವ ಧೋನಿ ಇಂದು ನಡೆದ ಲೋಕಸಭಾ ಚುನಾವಣೆಯಲ್ಲಿ ತಮ್ಮ ಮತ ಚಲಾಯಿಸುವ ಮೂಲಕ ರಾಷ್ಟ್ರೀಯ ಕೆಲಸ ಹಾಗೂ ದೇಶದ ನಾಗರಿಕನಾಗಿ ಮತ ಹಾಕುವ ಮೂಲಕ ಮತದಾನ ಎಲ್ಲರ ಹಕ್ಕು, ಎಲ್ಲರೂ ಚಲಾಯಿಸಿ ಎಂದು ತಮ್ಮ ಪುತ್ರಿಯ ಮೂಲಕ ಸಂದೇಶ ಹೊರಡಿಸಿದ್ದಾರೆ.
ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಹಾಲಿ ವಿಕೆಟ್ ಕೀಪರ್ ಕಮ್ ಬ್ಯಾಟ್ಸ್ಮನ್ ಆಗಿರುವ ಧೋನಿ ನೇತೃತ್ವದ ಸಿಎಸ್ಕೆ ಭಾನುವಾರ 12 ನೇ ಐಪಿಎಲ್ನ ತನ್ನ ಕೊನೆಯ ಪಂದ್ಯದಲ್ಲಿ ಪಂಜಾಬ್ ವಿರುದ್ಧ ಸೆಣಸಾಡಿ ಪಂದ್ಯ ಸೋಲನುಭವಿಸಿದೆ. ಆದರೆ, ಪಂದ್ಯದ ನಂತರ ತವರಿಗೆ ತೆರಳಿ ಇಂದು ನಡೆದ ಲೋಕಸಭಾ ಚುನಾವಣೆಯಲ್ಲಿಧೋನಿ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ.