ಚೆನ್ನೈ: ಯಾವ ತಂಡದ ಪರ ಆಡಿದರೂ ಧೋನಿ ಆಟ ಬದಲಾಗದು, ಅದು ರಾಷ್ಟ್ರೀಯ ಪಂದ್ಯವಾಗಲಿ, ಐಪಿಎಲ್ನಲ್ಲಾಗಲಿ ಅಥವಾ ದೇಶಿಯ ಟೂರ್ನಿಯಾದರೂ ಧೋನಿ ಮಾತ್ರ ತಮ್ಮ ಫಿನಿಶಿಂಗ್ ಸ್ಟೈಲ್ನಲ್ಲಿ ಬದಲಾಗುವುದಿಲ್ಲ ಎನ್ನುವುದಕ್ಕೆ ರಾಜಸ್ಥಾನ ರಾಯಲ್ಸ್ ನಡುವಿನ ಪಂದ್ಯದಲ್ಲಿ ತಿಳಿದುಬಂದಿದೆ.
ಟಾಸ್ ಸೋತು ಬ್ಯಾಟಿಂಗ್ ಇಳಿದ ಚೆನ್ನೈ 27 ರನ್ಗಳಿಸುವಷ್ಟರಲ್ಲಿ ಆರಂಭಿಕ ಮೂವರ ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತ ಎದುರಿಸಿತ್ತು. ಆದರೆ, ಕೇವಲ 5 ನೇ ಓವರ್ನಲ್ಲಿ 5 ನೇ ಬ್ಯಾಟ್ಸ್ಮನ್ ಆಗಿ ಕಣಕ್ಕಿಳಿದ ಎಂಎಸ್ ಧೋನಿ 46 ಎಸೆತಗಳಲ್ಲಿ 77 ರನ್ ಚಚ್ಚಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಆರಂಭಿಕ ಓವರ್ಗಳಲ್ಲಿ ಕೊಂಚ ನಿಧಾನಗತಿ ಆಟಕ್ಕೆ ಇಳಿದಿದ್ದ ಕ್ಯಾಪ್ಟನ್ ಕೂಲ್ ಕೊನೆಯ 4 ಓವರ್ಗಳಲ್ಲಿ ಬ್ರಾವೋ, ಜಡೇಜಾ ಜೊತೆಗೂಡಿ 64 ರನ್ ಬಾರಿಸಿದರು.
ಕೊನೆಯ ಓವರ್ನಲ್ಲಿ ಹ್ಯಾಟ್ರಿಕ್ ಸಹಿತ 28 ರನ್