ನವದೆಹಲಿ: ಭಾರತ ಕಂಡಂತಹ ಶ್ರೇಷ್ಠ ನಾಯಕ ಹಾಗೂ ಸ್ಫೋಟಕ ಆಟಗಾರ ಸೌರವ್ ಗಂಗೂಲಿ ಡೆಲ್ಲಿ ತಂಡ ಅಭ್ಯಾಸ ಸಮಯದಲ್ಲಿ ಬ್ಯಾಟಿಂಗ್ ನಡೆಸಿ ಯುವ ಆಟಗಾರರಿಗೆ ಮಾರ್ಗದರ್ಶನ ನೀಡಿದ್ದಾರೆ.
ಪ್ರಾಕ್ಟೀಸ್ ಸೆಸೆನ್ನಲ್ಲಿ ಯುವ ಬೌಲರ್ಗಳ ಬಾಳಿಗೆ ತಮ್ಮ ನೆಚ್ಚಿನ ಕಟ್ ಅಂಡ್ ಡ್ರೈವ್ ಶಾಟ್ ಮೂಲಕ ಬೌಂಡರಿಗಟ್ಟುವ ಕಲೆಯನ್ನು ಮರೆತಿಲ್ಲ ಎಂಬುದನ್ನು ತೋರಿಸಿಕೊಟ್ಟರು.
90 ದಶಕದಲ್ಲಿ ಬ್ಯಾಟಿಂಗ್ನಲ್ಲಿ ಅಬ್ಬರಿಸಿದ್ದ ಗಂಗೂಲಿ 2003 ರಲ್ಲಿ ತಮ್ಮ ನಾಯಕತ್ವದಲ್ಲಿ ಭಾರತ ತಂಡವನ್ನು ಫೈನಲ್ಗೇರಿಸಿದ್ದರು. ಐಪಿಎಲ್ನಲ್ಲೂ 2 ಬಾರಿ ಕೆಕೆಆರ್ ತಂಡದ ನಾಯಕರಾಗಿದ್ದರು. ನಂತರ ಪುಣೆ ವಾರಿಯರ್ಸ್ ತಂಡವನ್ನು ಮುನ್ನಡೆಸಿದ್ದರು.
ಇದೀಗ ಐಪಿಎಲ್ ಇತಿಹಾಸದಲ್ಲಿ ಅಸ್ಥಿರತೆಯುಳ್ಳ ಏಕೈಕ ತಂಡವಾದ ಡೆಲ್ಲಿ ಕ್ಯಾಪಿಟಲ್ ತಂಡವನ್ನು ಚಾಂಪಿಯನ್ ಮಾಡಲು ರಿಕಿ ಪಾಂಟಿಗ್ ಜೊತೆ ಮೆಂಟರ್ ಆಗಿರುವ ದಾದಾ ಅಭ್ಯಾಸದ ಸಮಯದಲ್ಲಿ ಯುವ ಆಟಗಾರರಿಗೆ ಬ್ಯಾಟಿಂಗ್ ಕೌಶಲ್ಯಗಳನ್ನು ತಿಳಿಸಿಕೊಡುತ್ತಿದ್ದಾರೆ. ಇಂದು ಅಭ್ಯಾಸದ ವೇಳೆ ಗಂಗೂಲಿ ಬ್ಯಾಟಿಂಗ್ ಮಾಡುತ್ತಿರುವ ವಿಡೀಯೋವನ್ನು ಡೆಲ್ಲಿ ಕ್ಯಾಪಿಟಲ್ ತನ್ನ ಅಫೀಶಿಯಲ್ ಟ್ವಿಟರ್ನಲ್ಲಿ ಶೇರ್ ಮಾಡಿಕೊಂಡಿದ್ದು, 90 ದಶಕದ ಯುವಕ ಇಂದು ಡ್ರೈವ್ ಮತ್ತು ಕಟ್ ಶಾಟ್ನಲ್ಲಿ ಶೈಲಿಯನ್ನು ಉಳಿಸಿಕೊಂಡಿದ್ದಾರೆ ಎಂದು ಬರೆದುಕೊಂಡಿದ್ದಾರೆ.