ಜೈಪುರ: ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವ ಡೆಲ್ಲಿ ಕ್ಯಾಪಿಟಲ್ ಹಾಗೂ ಕೊನೆಯಿಂದ 2 ನೇ ಸ್ಥಾನದಲ್ಲಿರುವ ರಾಜಸ್ಥಾನ ರಾಯಲ್ಸ್ ಇಂದು ಜೈಪುರದಲ್ಲಿ ಮುಖಾಮುಖಿಯಾಗಲಿವೆ.
ಟೂರ್ನಿಯಲ್ಲಿ 6 ಗೆಲುವು,4 ಸೋಲುಕಂಡಿರುವ ಶ್ರೇಯಸ್ ಪಡೆ ಯುವ ಸ್ಫೋಟಕ ಆಟಗಾರರ ಜೊತೆ ಶಿಖರ್ ಧವನ್,ಕಾಲಿನ್ ಇಂಗ್ರಾಮ್,ಅಮಿಶ್ರಾ ರೀತಿಯ ಸೀನಿಯರ್ಗಳನ್ನು ಹೊಂದಿದೆ. ಇದರಿಂದಲೇ ತಂಡ ಸಮತೋಲನ ಕಾಯ್ದುಕೊಳ್ಳುತ್ತಾ ಟೂರ್ನಿಯಲ್ಲಿ ಪ್ಲೇಆಫ್ನತ್ತ ಮುನ್ನುಗ್ಗುತ್ತಿದೆ.
ಬೌಲಿಂಗ್ ವಿಭಾದಲ್ಲೂ ರಬಾಡ,ಸಂದೀಪ್ ಲಾಮಿಚ್ಛಾನೆ, ಇಶಾಂತ್ ಅಕ್ಷರ್ ಪಟೇಲ್ ಕಳೆದ ಕೆಲವು ಪಂದ್ಯಗಳಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ್ದಾರೆ. ರಬಡಾ 10 ಪಂದ್ಯಗಳಿಂದ 21 ವಿಕೆಟ್ ಪಡೆದು ಟೂರ್ನಿಯಲ್ಲಿ ಗರಿಷ್ಟ ವಿಕೆಟ್ ಪಡೆದ ಬೌಲರ್ ಆಗಿದ್ದಾರೆ. ಸಾಂಘಿಕ ಪ್ರದರ್ಶನ ತೋರುತ್ತಿರುವ ಡೆಲ್ಲಿ ಅಸ್ಥಿರ ಪ್ರದರ್ಶನದಿಂದ ಹಿನ್ನಡೆ ಅನುಭವಿಸುತ್ತಿರುವ ರಾಜಸ್ಥಾನದ ವಿರುದ್ಧ ಗೆಲ್ಲುವ ನೆಚ್ಚಿನ ತಂಡವಾಗಿದೆ.
ಆಡಿರುವ 9 ಪಂದ್ಯಗಳಲ್ಲಿ 3 ಗೆಲುವು 6 ಸೋಲುಕಂಡಿರುವ ರಾಯಲ್ಸ್ ಪ್ಲೇಆಫ್ ತಲುಪಲು ಎಲ್ಲಾ ಪಂದ್ಯಗಳನ್ನೂ ಗೆಲ್ಲುವ ಅನಿವಾರ್ಯತೆಯಲ್ಲಿದೆ. ಇವತ್ತೂ ಕೂಡ ಬಟ್ಲರ್ ಅನುಪಸ್ಥಿತಿಯಲ್ಲೇ ಆಡಲಿದೆ. ಸಮಾಧಾನಕರ ಸಂಗತಿಯೆಂದರೆ ಸ್ಟಿವ್ ಸ್ಮಿತ್ ನಾಯಕತ್ವ. ರಹಾನೆಯಿಂದ ನಾಯಕತ್ವ ವಾಪಾಸ್ ಪಡೆದಿರುವ ಸ್ಮಿತ್ ಕಳೆದ ಪಂದ್ಯದಲ್ಲಿ ತಮ್ಮ ಚಾಣಾಕ್ಷತನ ಹಾಗೂ ತಂತ್ರಗಾರಿಕೆಯ ಬ್ಯಾಟಿಂಗ್ ಪ್ರಯೋಗಿಸಿ ಬಲಿಷ್ಠ ಮುಂಬೈಗೆ ಸೋಲುಣಿಸಿತ್ತು. ಇದರ ಜೊತೆಗೆ 17 ವರ್ಷದ ಯುವ ಆಟಗಾರ ರಿಯಾನ್ ಒರಾಗ್ ಅದ್ಭುತ ಪ್ರದರ್ಶನ ತೋರಿದ್ದರು.
ರಾಯಲ್ಸ್ಗೆ ತಲೆನೋವಾಗಿರುವುದೆಂದರೆ ದುಬಾರಿ ಬೆಲೆಯ ಬೆನ್ಸ್ಸ್ಟೋಕ್ಸ್ ಹಾಗೂ ಜಯದೇವ್ ಉನಾದ್ಕಟ್. ಈ ಇಬ್ಬರ ಬೌಲಿಂಗ್ ಹಾಗೂ ಸ್ಟೋಕ್ಸ್ರ ಆಲ್ರೌಂಡರ್ ಆಟ ಸಂಪೂರ್ಣ ವಿಫಲವಾಗಿದೆ. ಶ್ರೇಯಸ್ ಗೋಪಾಲ್, ಜೋಫ್ರಾ ಆರ್ಚರ್ ಮಾತ್ರ ಉತ್ತಮ ಬೌಲಿಂಗ್ ಪ್ರದರ್ಶನ ನೀಡುತ್ತಿದ್ದಾರೆ. ಇಂದು ಕೂಡ ತವರಿನಲ್ಲಿ ಪಂದ್ಯ ನಡೆಯುತ್ತಿರುವುದರಿಂದ ಮುಂಬೈ ಮಣಿಸಿರುವ ಖುಷಿಯಲ್ಲೇ ಡೆಲ್ಲಿಯನ್ನೂ ಸೋಲಿಸಿ ಅಂಕಪಟ್ಟಿಯಲ್ಲಿ ಚೇತರಿಕೆ ಕಾಣುವ ವಿಶ್ವಾಸದಲ್ಲಿದೆ.
ಮುಖಾಮುಖಿ: