ಕರ್ನಾಟಕ

karnataka

ETV Bharat / briefs

ಜಯದ ಲಯ ಮುಂದುವರೆಸುತ್ತಾ ಆರ್​ಸಿಬಿ..? ಪಂಜಾಬ್‌ಗೆ ಪ್ಲೆ ಆಫ್ ಕನಸು  ​ - Kohli

2012 ರಿಂದ 2017 ರವರೆಗಿನ ಐಪಿಎಲ್ ಸೀಸನ್‌ಗಳಲ್ಲಿ ಆರ್​ಸಿಬಿ ತಂಡದಲ್ಲಿ ಆಡಿರುವ ಆಟಗಾರರು ಈ ಬಾರಿ ಪಂಜಾಬ್‌ ತಂಡದಲ್ಲಿದ್ದಾರೆ. ಕ್ರಿಸ್​ಗೇಲ್, ಕೆಎಲ್​ ರಾಹುಲ್​, ಮಾಯಾಂಕ್​ ಅಗರ್​​ವಾಲ್​, ಕರುಣ್​ ನಾಯರ್​, ಸರ್ಫರಾಜ್​ ಖಾನ್​ ಸೇರಿದಂತೆ ಇನ್ನೂ ಕೆಲವು ಆಟಗಾರರು ಇವತ್ತು ಆರ್‌ಸಿಬಿ ಎದುರು ಅಬ್ಬರಿಸಲು ರೆಡಿಯಾಗಿದ್ದಾರೆ. ಸಾಕಷ್ಟು ಕುತೂಹಲ ಕೆರಳಿಸಿರುವ ಈ ಕಾದಾಟದಲ್ಲಿ ಉಭಯ ತಂಡಗಳು ಪರಸ್ಪರ 2ನೇ ಬಾರಿಗೆ ಮುಖಾಮುಖಿಯಾಗುತ್ತಿವೆ.

ಬೆಂಗಳೂರು

By

Published : Apr 24, 2019, 5:58 PM IST

ಬೆಂಗಳೂರು: ಆರ್​ಸಿಬಿಯಿಂದ ಹೊರಬಿದ್ದು ಪಂಜಾಬ್ ತಂಡ ಸೇರಿರುವ ಕ್ರಿಸ್​ ಗೇಲ್​,ರಾಹುಲ್​,ಮಯಾಂಕ್​ ಸೇರಿ ಐವರು ಮಾಜಿ ಆರ್​ಸಿಬಿ ಆಟಗಾರರಿರುವ ಪಂಜಾಬ್​ ಇಂದು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕೊಹ್ಲಿ ಬಳಗವನ್ನು ಎದುರಿಸುತ್ತಿದೆ.

ಈ ಹಿಂದಿನ ಸೀಸನ್‌ಗಳಲ್ಲಿ ಆರ್​ಸಿಬಿ ತಂಡದಲ್ಲೇ ಆಡಿರುವ ಕ್ರಿಸ್​ಗೇಲ್​ ಸೇರಿದಂತೆ ಕೆ.ಎಲ್.​ ರಾಹುಲ್​, ಮಯಾಂಕ್​ ಅಗರ್​​ವಾಲ್​, ಕರುಣ್​ ನಾಯರ್​, ಸರ್ಫರಾಜ್​ ಖಾನ್​,ಮಂದೀಪ್​ ಸಿಂಗ್​ ಹಾಗು ಮುರುಗನ್​ ಅಶ್ವಿನ್​ ಇವತ್ತು ತಮ್ಮ ತವರು ತಂಡದ ವಿರುದ್ಧವೇ ಹೋರಾಟ ನಡೆಸಲಿದ್ದಾರೆ. ಅದರಲ್ಲೂ ಗೇಲ್​, ರಾಹುಲ್​ ಆರ್​ಸಿಬಿಯಲ್ಲಿ ಅದ್ಭುತ ಪ್ರದರ್ಶನ ತೋರಿದ ಆಟಗಾರರಾಗಿದ್ದು, ಇವತ್ತೂ ಕೂಡ ರನ್‌ ಹೊಳೆ ಹರಿಸುತ್ತಾರಾ ಎನ್ನುವುದು ಅಭಿಮಾನಿಗಳ ನಿರೀಕ್ಷೆಯಾಗಿದೆ.

ಈ ಆವೃತ್ತಿಯ 10 ಪಂದ್ಯಗಳಲ್ಲಿ 5 ಜಯ ಮತ್ತು 5 ಬಾರಿ ಸೋಲು ಕಂಡಿರುವ ಪಂಜಾಬ್​ಗೆ ಪ್ಲೇ ಆಫ್​ ತಲುಪಲು ಈ ಗೆಲುವು ಅತ್ಯಗತ್ಯವಾಗಿದೆ. ಹಾಗಾಗಿ ಆರ್‌ಸಿಬಿ ವಿರುದ್ಧ ಸಂಘಟಿತ ಯೋಜನೆ ರೂಪಿಸಿರುವ ಪಂಜಾಬ್, ಗೆಲುವಿಗಾಗಿ ಅಬ್ಬರದ ಆಟಕ್ಕೆ ಮುಂದಾಗುವ ಸಾಧ್ಯತೆ ಇದೆ.

ರಾಹುಲ್​-ಗೇಲ್​ ಜೋಡಿಗೆ ಈ ಪಿಚ್​ನಲ್ಲಿ ಆಡಿದ ಅನುಭವ ಬೆನ್ನಿಗಿದ್ದು, ಆರ್​ಸಿಬಿಗೆ ಈ ಜೋಡಿ ತಲೆನೋವಾಗಿ ಕಾಡುವ ಸಾಧ್ಯತೆ ದಟ್ಟವಾಗಿದೆ. ಆದರೆ, ಇವರಿಬ್ಬರನ್ನು ಹೊರತುಪಡಿಸಿ ಉಳಿದ ಆಟಗಾರರು ನಿರೀಕ್ಷಿತ ಪ್ರದರ್ಶನ ತೋರದಿರುವ ಕಾರಣಕ್ಕೆ ಪಂಜಾಬ್ ಕೆಲವು ಪಂದ್ಯಗಳನ್ನು ಕಳೆದುಕೊಳ್ಳಬೇಕಾಯಿತು. ಇದು ಆರ್‌ ಅಶ್ವಿನ್ ಬಳಗದ ಮೈನಸ್‌ ಪಾಯಿಂಟ್‌.

ಕಳೆದ ಪಂದ್ಯದಲ್ಲಿ ಸಿಎಸ್​ಕೆ ವಿರುದ್ಧ 1 ರನ್​ನಿಂದ ಗೆಲುವು ಸಾಧಿಸಿರುವ ಆರ್​ಸಿಬಿಗೆ ಪ್ಲೇ ಆಫ್​ ತಲುಪಬೇಕಾದರೆ ಮುಂದಿನ ಎಲ್ಲಾ ಪಂದ್ಯಗಳನ್ನು ಗೆಲ್ಲಬೇಕಿದೆ. ಅಷ್ಟೇ ಅಲ್ಲ, ರಾಜಸ್ಥಾನ, ಕೆಕೆಆರ್, ಎಸ್​ಆರ್​ಹೆಚ್​ ಹಾಗೂ ಪಂಜಾಬ್​ ತಂಡಗಳೂ ಉಳಿದಿರುವ 4 ಪಂದ್ಯಗಳಲ್ಲಿ ಸೋಲುವುದನ್ನೇ ನಿರೀಕ್ಷಿಸಬೇಕು.

ಡೇಲ್​ ಸ್ಟೈನ್​ ತಂಡ ಸೇರಿದ ಬಳಿಕ ಆರ್‌ಸಿಬಿ ಬೌಲಿಂಗ್​ ವಿಭಾಗದಲ್ಲಿ ಮಹತ್ತರ ಬದಲಾವಣೆಯಾಗಿದೆ. ನವದೀಪ್​ ಸೈನಿ ಕೂಡ ಉತ್ತಮ ಬೌಲಿಂಗ್​ ಪ್ರದರ್ಶನ ತೋರುತ್ತಿದ್ದಾರೆ. ಬ್ಯಾಟಿಂಗ್​ನಲ್ಲಿ ಕೊಹ್ಲಿ,ಎಬಿಡಿ, ಪಾರ್ಥಿವ್​ ಹಾಗೂ ಮೊಯಿನ್​ ಅಲಿ ಉತ್ತಮ ಪ್ರದರ್ಶನ ಮುಂದುವರೆಸಿದರೆ ಪಂಜಾಬ್​ ವಿರುದ್ಧ ಗೆಲುವು ಕಷ್ಟವೇನಲ್ಲ.

ಮುಖಾಮುಖಿ:
ಎರಡು ತಂಡಗಳು 23 ಬಾರಿ ಮುಖಾಮುಖಿಯಾಗಿದ್ದು, ಆರ್​ಸಿಬಿ 11 ಪಂಜಾಬ್​ 12 ಪಂದ್ಯಗಳಲ್ಲಿ ಜಯ ಸಾಧಿಸಿವೆ. ಚಿನ್ನಸ್ವಾಮಿ ಮೈದಾನದಲ್ಲಿ 10 ಬಾರಿ ಮುಖಾಮುಖಿಯಾಗಿದ್ದು, ಎರಡು ತಂಡಗಳು ತಲಾ 5 ಗೆಲುವು ದಾಖಲಿಸಿವೆ.

ಆರ್​ಸಿಬಿ: (ಸಂಭಾವ್ಯ ತಂಡ)
ಮೊಯಿನ್​ ಅಲಿ, ಪಾರ್ಥಿವ್​ ಪಟೇಲ್​, ವಿರಾಟ್​ ಕೊಹ್ಲಿ(ನಾಯಕ​), ಎಬಿ ಡಿವಿಲಿಯರ್ಸ್​​, ಮಾರ್ಕಸ್ ಸ್ಟೊಯಿನಿಸ್​, ಅಕ್ಷ್​​ದೀಪ್​ ನಾಥ್​​, ಪವನ್​ ನೇಗಿ, ಡೇಲ್​ ಸ್ಟೇನ್​​​​, ನವದೀಪ್​ ಸೈನಿ, ಯಜುವೇಂದ್ರ ಚಹಾಲ್​, ಮೊಹಮ್ಮದ್​ ಸಿರಾಜ್​​

ಕಿಂಗ್ಸ್​ ಇಲೆವೆನ್​ ಪಂಜಾಬ್:( ಸಂಭಾವ್ಯ ತಂಡ)

​ಆರ್​.ಆಶ್ವಿನ್​(ನಾಯಕ),ಕ್ರಿಸ್​ ಗೇಲ್​, ಮಯಾಂಕ್​ ಅಗರ್​ವಾಲ್​,ಕೆ.ಎಲ್​ ರಾಹುಲ್​, ಮಂದೀಪ್​ ಸಿಂಗ್​,ಮುಜೀಬ್​ ಉರ್​ ರೆಹಮಾನ್/ ಸಾಮ್​ ಕರ್ರನ್​, ನಿಕೋಲಸ್​ ಪೂರನ್​, ಸರ್ಫರಾಜ್​ ಖಾನ್​,ಮೊಹಮ್ಮದ್​ ಶಮಿ, ಆ್ಯಂಡ್ರ್ಯೂ ಟೈ, ಅಂಕಿತ್​ ರಜಪೂತ್

ABOUT THE AUTHOR

...view details