ಮುಂಬೈ:ವಿಶ್ವಕಪ್ನಲ್ಲಿ ಪಾಲ್ಗೊಳ್ಳುವ ಆಟಗಾರರ ಹಾಗೂ ಇತರೆ ಸಿಬ್ಬಂದಿಯ ಪತ್ನಿಯರು ಹಾಗೂ ಕುಟುಂಬಸ್ಥರಿಗೆ ಇಂಗ್ಲೆಂಡ್ನಲ್ಲಿ ಉಳಿದುಕೊಳ್ಳಲು ಕೇವಲ 15 ದಿನಗಳ ಮಾತ್ರ ಅವಕಾಶ ನೀಡಿದ್ದು, ಅದು ವಿಶ್ವಕಪ್ ಆರಂಭವಾದ 21 ದಿನಗಳ ನಂತರ ಇಂಗ್ಲೆಂಡ್ಗೆ ತೆರಳಲು ಬಿಸಿಸಿಐ ಅನುಮತಿ ನೀಡಿದೆ.
ವಿಶ್ವಕಪ್ ಮೇ 30 ರಿಂದ ಆರಂಭವಾಗಲಿದ್ದು ಭಾರತ ಜೂನ್ 5ರಂದು ದ. ಆಫ್ರಿಕಾ ವಿರುದ್ಧ ತನ್ನ ಮೊದಲ ಪಂದ್ಯವಾಡಲಿದೆ. ಕೊಹ್ಲಿ, ಧವನ್ ಹಾಗೂ ಧೋನಿ ಪತ್ನಿಯರು ಕಳೆದ ಆಸ್ಟ್ರೇಲಿಯಾ ಪ್ರವಾಸದ ವೇಳೆ ತಂಡದ ಜೊತೆಯಲ್ಲೇ ತೆರಳಿದ್ದರು. ಈ ಸಂದರ್ಭದಲ್ಲಿ ಆಟಗಾರರ ಸೇರಿದಂತೆ 37 ಜನರಿಗೆ ಸೂಕ್ತ ಸೌಲಭ್ಯ ಒದಗಿಸಿತ್ತು. ಆದರೆ ಇದು ವಿಶ್ವಕಪ್ ಆಗಿರುವುದರಿಂದ ಪಾಸ್, ಹೋಟೆಲ್ ಕೊಠಡಿ, ಪ್ರಯಾಣದ ಸಮಸ್ಯೆಗಳನ್ನು ತಪ್ಪಿಸಲು ಬಿಸಿಸಿಐ ಈ ಮಹತ್ವದ ನಿರ್ಧಾರ ಪ್ರಕಟಿಸಿದೆ.