ಲಖನೌ: ಉತ್ತರಪ್ರದೇಶದ ಕನೌಜ್ ಲೋಕಸಭಾ ಕ್ಷೇತ್ರದ ಎರಡು ಮತಗಟ್ಟೆಗಳಲ್ಲಿ ಸಮಾಜವಾದಿ ಪಕ್ಷಕ್ಕೆ ವೋಟ್ ಮಾಡಿದರೆ, ಅದು ಬಿಜೆಪಿಗೆ ಹೋಗುತ್ತಿದೆ ಎಂದು ಗಂಭೀರ ಆರೋಪ ಮಾಡಿದೆ.
ಎಸ್ಪಿ ಅಭ್ಯರ್ಥಿಗೆ ವೋಟ್ ಹಾಕಿದ್ರೆ ಬಿಜೆಪಿಗೆ: ಚುನಾವಣೆ ಆಯೋಗಕ್ಕೆ ದೂರು
ಉತ್ತರಪ್ರದೇಶದ ಕನೌಜ್ನಲ್ಲಿ ಸಮಾಜವಾದಿ ಪಕ್ಷದಿಂದ ಡಿಂಪಲ್ ಯಾದವ್ ಸ್ಪರ್ಧೆ ಮಾಡಿದ್ದು, ಈ ಕ್ಷೇತ್ರದ ಎರಡು ಮತಗಟ್ಟೆಗಳಲ್ಲಿ ಸೈಕಲ್ಗೆ ವೋಟ್ ಮಾಡಿದರೆ ಅದು ಕಮಲಕ್ಕೆ ಹೋಗುತ್ತಿದೆ ಎಂದು ಗಂಭೀರ ಆರೋಪ ಮಾಡಿದೆ.
ಇದಕ್ಕೆ ಸಂಬಂಧಿಸಿದಂತೆ ಸಮಾಜವಾದಿ ಪಕ್ಷದ ಮುಖಂಡ ಧರ್ಮೇಂದ್ರ ಯಾದವ್ ಮಾತನಾಡಿದ್ದು, ಕನೌಜ್ನ ಮತಗಟ್ಟೆ ನಂಬರ್ 482 ಹಾಗೂ 483ರಲ್ಲಿ ಈ ತೊಂದರೆ ಕಾಣಿಸಿಕೊಂಡಿದ್ದಾಗಿ ತಿಳಿಸಿದ್ದಾರೆ. ಅಧಿಕಾರದಲ್ಲಿರುವ ಬಿಜೆಪಿ ವಿವಿಪ್ಯಾಟ್ ದುರ್ಬಳಕೆ ಮಾಡಿಕೊಂಡಿದ್ದು, ನಮ್ಮ ಪಕ್ಷಕ್ಕೆ ವೋಟ್ ಮಾಡಿದರೆ ಅದು ಬಿಜೆಪಿಗೆ ಹೋಗುತ್ತಿದೆ ಎಂದು ಆರೋಪಿಸಿದ್ದಾರೆ. ಇದೇ ವೇಳೆ, ಈ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಪೊಲೀಸ್ ಮುಖ್ಯಸ್ಥ ಕೂಡ ಬಿಜೆಪಿ ಪರ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂಬ ಗಂಭೀರ ಆರೋಪ ಮಾಡಿದ್ದಾರೆ.
ಈ ತಕ್ಷಣವೇ ಪೊಲೀಸ್ ಮುಖ್ಯಸ್ಥರಾಗಿರುವ ಓಪಿ ಸಿಂಗ್ನನ್ನ ವಜಾಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ. ಉತ್ತರಪ್ರದೇಶದ ಕನೌಜ್ನಿಂದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಪತ್ನಿ ಡಿಂಪಲ್ ಯಾದವ್ ಸ್ಪರ್ಧೆ ಮಾಡಿದ್ದಾರೆ.