ಕರ್ನಾಟಕ

karnataka

ETV Bharat / briefs

ಸಮೀಕ್ಷೆ ಬಗ್ಗೆ ವಿವೇಕ್​ ಟ್ವೀಟ್​: ನಟಿ ಸೋನಂ,ಮಹಿಳಾ ಆಯೋಗಕ್ಕೆ ಒಬೆರಾಯ್​ ತಿರುಗೇಟು! - ವಿಶ್ವಸುಂದರಿ

ಲೋಕಸಭಾ ಚುನಾವಣೋತ್ತರ ಸಮೀಕ್ಷೆಯ ವಿಷಯವನ್ನಿಟ್ಟುಕೊಂಡು ಬಾಲಿವುಡ್​ ನಟ ವಿವೇಕ್​ ಒಬೆರಾಯ್​ ಮಾಡಿರುವ ಟ್ವೀಟ್​ನಿಂದ ಗರಂ ಆಗಿರುವ ಮಹಿಳಾ ಆಯೋಗ ನೋಟಿಸ್​ ಜಾರಿ ಮಾಡಿದ್ದು, ಇದೀಗ ಪ್ರತಿಕ್ರಿಯೆ ನೀಡಿದ್ದಾರೆ.

ನಟಿ ಸೋನಂ,ಮಹಿಳಾ ಆಯೋಗಕ್ಕೆ ಒಬೆರಾಯ್​ ತಿರುಗೇಟು

By

Published : May 20, 2019, 11:37 PM IST

Updated : May 20, 2019, 11:56 PM IST

ಮುಂಬೈ: ಲೋಕಸಭೆ ಚುನಾವಣೆಗೆ ಕೊನೆಯ ಹಂತದ ವೋಟಿಂಗ್​ ಬಳಿಕ ದೇಶದೆಲ್ಲೆಡೆ ಚುನಾವಣೋತ್ತರ ಸಮೀಕ್ಷೆ ಹೊರಬಿದ್ದಿದ್ದು, ಇದೇ ವಿಚಾರವಾಗಿ ಬಾಲಿವುಡ್ ನಟ ವಿವೇಕ್ ಒಬೆರಾಯ್ ಮಾಜಿ ವಿಶ್ವ ಸುಂದರಿ ಐಶ್ವರ್ಯ ರೈ ಫೋಟೋ ಬಳಕೆ ಮಾಡಿಕೊಂಡು ಟ್ವೀಟ್​ ಮಾಡಿದ್ದರು.

ನಟಿ ಸೋನಂ,ಮಹಿಳಾ ಆಯೋಗಕ್ಕೆ ಒಬೆರಾಯ್​ ತಿರುಗೇಟು

ಸಮೀಕ್ಷೆ ಕುರಿತು ಐಶ್ವರ್ಯ ರೈ ಫೋಟೋ ಬಳಸಿ ವಿವಾದಿತ ಟ್ವೀಟ್​... ನಟ ವಿವೇಕ್​ ಒಬೆರಾಯ್​ಗೆ ನೋಟಿಸ್​!

ಇದೇ ವಿಷಯವಾಗಿ ನಟಿ ಸೋನಂ ಕಪೂರ್​ ನಟ ವಿವೇಕ್​ ಒಬೆರಾಯ್​ ವಿರುದ್ಧ ಟ್ಟಿಟರ್​​ನಲ್ಲಿ ಹರಿಹಾಯ್ದಿದ್ದರು. ಇದೀಗ ಈ ವಿಷಯಕ್ಕೆ ಸಂಬಂಧಿಸಿದಂತೆ ನಟ ಪ್ರತಿಕ್ರಿಯೆ ನೀಡಿದ್ದಾರೆ. ನೀವೂ ನಿಮ್ಮ ಸಿನಿಮಾಗಳಲ್ಲಿ ಸ್ವಲ್ಪ ಕಡಿಮೆ ಓವರ್​ಆ್ಯಕ್ಟ್​ ಮಾಡಿ, ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸಮಯ ವ್ಯರ್ಥ ಮಾಡ್ಬೇಡಿ. ಕಳೆದ 10 ವರ್ಷಗಳಿಂದ ನಾನು ಮಹಿಳಾ ಸಬಲೀಕರಣಕ್ಕಾಗಿ ದುಡಿಯುತ್ತಿದ್ದು, ನಾನು ಮಹಿಳಾ ಶಕ್ತಿ ಪರ ದುಡಿಯಲು ಆರಂಭಿಸಿದಾಗ ಸೋನಂ ಮೇಕಪ್​ ಮಾಡಿಕೊಳ್ಳುವುದರಲ್ಲಿ ಸಮಯ ವ್ಯರ್ಥ ಮಾಡುತ್ತಿದ್ದರು ಎಂದು ಹೇಳಿದ್ದಾರೆ.

ಇದೇ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ನಟ ವಿವೆಕ್​ ಒಬೆರಾಯ್​, ನಾನು ರಾಷ್ಟ್ರೀಯ ಮಹಿಳಾ ಆಯೋಗದ ನೋಟಿಸ್​ಗೂ ಕಾಯುತ್ತಿದ್ದು, ಎರಡು ಆಯೋಗಕ್ಕೆ ಒಂದೇ ಸಲ ಉತ್ತರ ನೀಡಲಿದ್ದೇನೆ. ನಾನು ಮಾಡಿರುವ ಟ್ವೀಟ್​​ನಲ್ಲಿ ಯಾವುದೇ ತಪ್ಪು ಮಾಡಿಲ್ಲ ಎಂಬುದು ನನಗೆ ಗೊತ್ತಿದೆ. ಜತೆಗೆ ಯಾವುದೇ ಕಾರಣಕ್ಕೂ ನಾನು ಈ ವಿಷಯವಾಗಿ ಕ್ಷಮೆಯಾಚನೆ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಕಾಣದ ಕೈಗಳು ಇದರಲ್ಲಿ ಕೆಲಸ ಮಾಡುತ್ತಿದ್ದು, ರಾಜಕೀಯಕ್ಕೆ ಜೋಡಿಸುವ ಕೆಲಸ ಮಾಡುತ್ತಿವೆ ಎಂದಿದ್ದಾರೆ.

Last Updated : May 20, 2019, 11:56 PM IST

ABOUT THE AUTHOR

...view details