ಕರ್ನಾಟಕ

karnataka

ETV Bharat / briefs

ವಿನೇಶ್​ ಪೋಗಟ್​, ಭಜರಂಗ್​ ಪುನಿಯಾಗೆ ಖೇಲ್​ರತ್ನ ನೀಡಲು ಶಿಫಾರಸು! - ಶಿಫಾರಸು

ರಾಹುಲ್​ ಅವರೆ, ಹರ್​ಪ್ರೀತ್​​ ಸಿಂಗ್​, ದಿವ್ಯಾ ಕಕರನ್​ ಮತ್ತು ಪೂಜಾ ಧಂಡಾಗೆ ಅರ್ಜುನ್​ ಪ್ರಶಸ್ತಿ ನೀಡುವಂತೆ ಹಾಗೂ ವಿರೇಂದ್ರ ಕುಮಾರ್​, ಸುಜೀತ್​ ಮಾನ್​, ನರೇಂದ್ರ ಕುಮಾರ್​​ ಮತ್ತು ವಿಕ್ರಮ ಕುಮಾರ್​​ ದ್ರೋಣಾಚಾರ್ಯ ಪ್ರಶಸ್ತಿ ನೀಡುವಂತೆ ಶಿಫಾರಸು ಮಾಡಿದೆ.

ಖೇಲ್​ರತ್ನ

By

Published : Apr 29, 2019, 3:15 PM IST

ನವದೆಹಲಿ:ರೆಸ್ಲಿಂಗ್​ ಫೆಡರೇಷನ್​ ಆಫ್​ ಇಂಡಿಯಾ( ಡಬ್ಲ್ಯುಎಫ್​ಐ) ಕುಸ್ತಿ ಪಟುಗಳಾದ ವಿನೇಶ್​ ಪೋಗಟ್​​​ ಹಾಗೂ ಬಜರಂಗ್​ ಪುನಿಯಾ ಅವರಿಗೆ ರಾಜೀವ್​ ಖೇಲ್​ರತ್ನ ನೀಡುವಂತೆ ಶಿಫಾರಸು ಮಾಡಿ ಕೇಂದ್ರ ಕ್ರೀಡಾ ಸಚಿವಾಲಯಕ್ಕೆ ಮನವಿ ಮಾಡಿದೆ.

ಇನ್ನು ರಾಹುಲ್​ ಅವರೆ, ಹರ್​ಪ್ರೀತ್​​ ಸಿಂಗ್​, ದಿವ್ಯಾ ಕಕರನ್​ ಮತ್ತು ಪೂಜಾ ಧಂಡಾಗೆ ಅರ್ಜುನ್​ ಪ್ರಶಸ್ತಿ ನೀಡುವಂತೆ ಹಾಗೂ ವಿರೇಂದ್ರ ಕುಮಾರ್​, ಸುಜೀತ್​ ಮಾನ್​, ನರೇಂದ್ರ ಕುಮಾರ್​​ ಮತ್ತು ವಿಕ್ರಮ ಕುಮಾರ್​​ ದ್ರೋಣಾಚಾರ್ಯ ಪ್ರಶಸ್ತಿ ನೀಡುವಂತೆ ಶಿಫಾರಸು ಮಾಡಿದೆ.

ಕಳೆದ ಎರಡು ವರ್ಷಗಳಲ್ಲಿ ಬಜರಂಗ್​ ಪುನಿಯಾ, ವಿನೇಶ್​ ಪೋಗಟ್​ ಅತ್ಯದ್ಭುತ ಪ್ರದರ್ಶನದ ಮೂಲಕ ದೇಶಕ್ಕೆ ಗೌರವ ತಂದಿತ್ತಿದ್ದಾರೆ. ಇನ್ನು ಬಜರಂಗ್​ ಕುಸ್ತಿ ಅಖಾಡದಲ್ಲಿ ವಿಶ್ವದ ನಂಬರ್​ ಒನ್​ ಆಟಗಾರನಾಗಿದ್ದಾನೆ. ಇತ್ತೀಚೆಗೆ ಏಷ್ಯನ ರೆಸ್ಲಿಂಗ್​ ಚಾಂಪಿಯನ್​​ಶಿಪ್​​ ಮತ್ತು ಏಷ್ಯನ್ ಗೇಮ್ಸ್​​ ನಲ್ಲೂ ಪದಕಗಳ ಬೇಟೆಯಾಡಿದ್ದರು.

2020 ರ ಒಲಿಂಪಿಕ್​​ನಲ್ಲಿ ಕುಸ್ತಿಯಲ್ಲಿ ಒಂದು ಪದಕದ ಆಸೆಯನ್ನ ಭಾರತೀಯ ಕುಸ್ತಿ ಅಕಾಡೆಮಿ ಹೊಂದಿದೆ. ಇನ್ನು ವಿನೇಶ್​ ಪೋಗಟ್​​ ಸಹ, ಏಷ್ಯನ್​​ ರೆಸ್ಲಿಂಗ್​ ಚಾಂಪಿಯನ್​ಶಿಪ್​ನಲ್ಲಿ ಕಂಚಿನ ಪದಕ ಕೊಳ್ಳೆ ಹೊಡೆದಿದ್ದರು. ಏಷ್ಯನ್​ ಗೇಮ್ಸ್​ನಲ್ಲಿ ಪೊಗತ್​ ಬಂಗಾರದ ಬೇಟೆಯಾಡಿದ್ದರು.

ABOUT THE AUTHOR

...view details