ಕರ್ನಾಟಕ

karnataka

ETV Bharat / briefs

ಒಡಿಶಾಗೆ ಅಪ್ಪಳಿಸಿದ 'ಫಣಿ' 200 ಕಿ.ಮೀ ವೇಗದಲ್ಲಿ ಗಾಳಿ, ಮೂವರ ಸಾವು

ಸುಮಾರು 200 ಕಿ.ಮೀ ವೇಗದಲ್ಲಿ ಗಾಳಿಯ ಜೊತೆಗೆ ಮಳೆಯೂ ಸುರಿಯುತ್ತಿದೆ. ಗಾಳಿಯ ರಭಸಕ್ಕೆ ಮರಗಳು ಧರೆಗುರುಳಿವೆ. ಒಡಿಶಾ ರಾಜ್ಯದ ಎಲ್ಲೆಡೆ ನಿರಂತರವಾಗಿ ಮಳೆಯಾಗುತ್ತಿದೆ. 'ಫಣಿ' ಆಗಲೇ ಮೂವರನ್ನು ಬಲಿ ತೆಗೆದುಕೊಂಡಿದೆ.

By

Published : May 3, 2019, 11:26 AM IST

Updated : May 3, 2019, 3:21 PM IST

ಫಣಿ

ಭುವನೇಶ್ವರ:ಕಳೆದ ಹಲವು ವರ್ಷಗಳಲ್ಲೇ ಅತ್ಯಂತ ಪ್ರಬಲ ಚಂಡಮಾರುತ ಎಂದೇ ಪರಿಗಣಿಸಲಾಗಿರುವ ಫಣಿ ಚಂಡಮಾರುತ ಒಡಿಶಾದ ಪುರಿ ಕರಾವಳಿ ತೀರಕ್ಕೆ ಅಪ್ಪಳಿಸಿದೆ.

ಸುಮಾರು 200 ಕಿ.ಮೀ ವೇಗದಲ್ಲಿ ಗಾಳಿಯ ಜೊತೆಗೆ ಮಳೆಯೂ ಸುರಿಯುತ್ತಿದೆ. ಗಾಳಿಯ ರಭಸಕ್ಕೆ ಮರಗಳು ಧರೆಗುರುಳಿವೆ. ಒಡಿಶಾ ರಾಜ್ಯದ ಎಲ್ಲೆಡೆ ನಿರಂತರವಾಗಿ ಮಳೆಯಾಗುತ್ತಿದೆ.

ಭಾರಿ ಗಾಳಿ ಮಳೆಗೆ ಮರಗಳು ಧರೆಗುಳಿದಿದ್ದು ಸದ್ಯ ಮೂವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ತೀವ್ರ ಮಳೆಯಿಂದ ಸಾಕಷ್ಟು ಹಳ್ಳಿಗಳು ಸಂಪೂರ್ಣ ಜಲಾವೃತವಾಗಿದೆ.

ಫಣಿ ಚಂಡಮಾರುತದ ಹಿನ್ನೆಲೆಯಲ್ಲಿ ಒಡಿಶಾ, ಪಶ್ಚಿಮ ಬಂಗಾಳದಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಯಾವುದೇ ಪ್ರಾಣಹಾನಿಯಾಗಬಾರದು ಎಂದು ಸಾಕಷ್ಟು ಮುಂಜಾಗ್ರತಾ ಕ್ರಮ ವಹಿಸಲಾಗಿದೆ.

ಒಡಿಶಾದಲ್ಲಿ ಈಗಾಗಲೇ 11 ಲಕ್ಷ ಮಂದಿಯನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರ ಮಾಡಲಾಗಿದೆ. ಎನ್​ಡಿಆರ್​ಎಫ್​ ತಂಡ ರಕ್ಷಣಾ ಕಾರ್ಯಕ್ಕೆ ನಿಯೋಜಿಸಲಾಗಿದೆ.

ಭಾರತೀಯ ಹವಾಮಾನ ಇಲಾಖೆಯ ಪ್ರಕಾರ ಇಂದು ಸಂಜೆ ವೇಳೆಗೆ ಫಣಿ ಚಂಡಮಾರುತ ಒಡಿಶಾ ದಾಟಿ ಪಶ್ಚಿಮ ಬಂಗಾಳದತ್ತ ಸಾಗಲಿದೆ.

Last Updated : May 3, 2019, 3:21 PM IST

ABOUT THE AUTHOR

...view details