ಕರ್ನಾಟಕ

karnataka

ETV Bharat / briefs

ಸೋಲಿಲ್ಲದ ಸರದಾರ ವಿಜೇಂದರ್‌ಗೆ ನನ್ನ ಕಂಡ್ರೆ ಭಯ ಎಂದ ಪಾಕಿಸ್ತಾನ ಮೂಲದ ಬಾಕ್ಸರ್​

ಪಾಕಿಸ್ತಾನ ಮೂಲದ ಬ್ರಿಟಿಷ್‌ ಬಾಕ್ಸರ್‌ ಆಮೀರ್‌ ಖಾನ್‌  2008ರ ಒಲಿಂಪಿಕ್ಸ್‌ ಪದಕ ವಿಜೇತ ಹಾಗೂ ವೃತ್ತಿಪರ ಬಾಕ್ಸಿಂಗ್‌ನಲ್ಲಿ ಸೋಲೆ ಕಾಣದ ವೀರನಿಗೆ ನನ್ನನ್ನು ಕಂಡರೆ ಭಯವಿರಬಹುದು ಅದಕ್ಕಾಗಿ ನನ್ನ ವಿರುದ್ಧ ಪಂದ್ಯವಾಡುವುದನ್ನು ಮುಂದಕ್ಕೆ ಹಾಕುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

bx

By

Published : Jun 2, 2019, 9:55 AM IST

ನವದೆಹಲಿ:ವೃತ್ತಿಪರ ಬಾಕ್ಸಿಂಗ್​ನಲ್ಲಿ 10 ಗೆಲುವು ಕಂಡು ಸೋಲೆ ಕಾಣದ ಭಾರತದ ಬಾಕ್ಸರ್​ ವಿಜೇಂದರ್​ ಸಿಂಗ್​ರನ್ನು ಪಾಕಿಸ್ತಾನ ಬಾಕ್ಸರ್​ ಆಮೀರ್‌ ಖಾನ್‌ ಮತ್ತೊಮ್ಮೆ ಹೀಯಾಳಿಸಿದ್ದಾರೆ.

ಪಾಕಿಸ್ತಾನ ಮೂಲದ ಬ್ರಿಟಿಷ್‌ ಬಾಕ್ಸರ್‌ ಆಮೀರ್‌ ಖಾನ್‌ 2008ರ ಒಲಿಂಪಿಕ್ಸ್‌ ಪದಕ ವಿಜೇತ ಹಾಗೂ ವೃತ್ತಿಪರ ಬಾಕ್ಸಿಂಗ್‌ನಲ್ಲಿ ಸೋಲೆ ಕಾಣದ ವೀರನಿಗೆ ನನ್ನನ್ನು ಕಂಡರೆ ಭಯವಿರಬಹುದು ಅದಕ್ಕಾಗಿ ನನ್ನ ವಿರುದ್ಧ ಪಂದ್ಯವಾಡುವುದನ್ನು ಮುಂದಕ್ಕೆ ಹಾಕುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

ವಿಜೇಂದರ್‌ ಹಾಗೂ ಆಮೀರ್‌ ನಡುವಿನ ಪಂದ್ಯ ಹಲವು ಬಾರಿ ವಿವಿಧ ಕಾರಣಗಳಿಂದಾಗಿ ಮುಂದೂಡಲ್ಪಟ್ಟಿದೆ. ಪಾಕಿಸ್ತಾನದಲ್ಲಿ ಜನಿಸಿದ ಬ್ರಿಟಿಷ್‌ ಬಾಕ್ಸರ್‌ ಆಮೀರ್‌ ಖಾನ್‌ 17 ವರ್ಷದವರಿರುವಾಗಲೇ 2004ರ ಅಥೆನ್ಸ್ ಒಲಿಂಪಿಕ್ಸ್'ನಲ್ಲಿ ಬೆಳ್ಳಿಪದಕ ಜಯಿಸಿದ್ದರು. 2008 ರ ಒಲಿಂಪಿಕ್​ನಲ್ಲಿ ವಿಜೇಂದರ್​ ಕಂಚಿನ ಪದಕ ಪಡೆದಿದ್ದಾರೆ.

2015ರಲ್ಲಿ ವೃತ್ತಿಪರ ಬಾಕ್ಸಿಂಗ್ ಕಾಲಿಟ್ಟ​ ವಿಜೇಂದರ್​ ತಮ್ಮ ಚೊಚ್ಚಲ ಪಂದ್ಯದಲ್ಲಿ ಆಸ್ಟ್ರೇಲಿಯಾದ ಸನ್ನಿ ವೈಟಿಂಗ್​ರನ್ನು 1-0ಯಲ್ಲಿ ಸೋಲಿಸಿದ್ದರು. ನಂತರ ದೀನ್​ ಗಿಲ್ಲೆನ್​, ಸಮೆಟ್​ ಹ್ಯೂಸೈನೋವ್​, ಅಲೆಕ್ಸಾಂಡರ್​ ಹೋರ್ವತ್​, ಜುಲ್ಫಿಕರ್​ ಮೈಮೈಥಲಿ ಸೇರಿದಂತೆ 10 ಜನರನ್ನು ಒಂದು ಅಂಕ ಬಿಟ್ಟು ಕೊ ಡದೆ ಸೋಲಿಸಿದ್ದಾರೆ.

ABOUT THE AUTHOR

...view details