ಕರ್ನಾಟಕ

karnataka

ETV Bharat / briefs

ವಿಕ್ಟೋರಿಯಾ ಆಸ್ಪತ್ರೆಯ ವಕೀಲರ ವಾರ್ಡ್ ಕೋವಿಡ್ ಚಿಕಿತ್ಸೆಗೆ ಬಳಸಲು ಮನವಿ - ವಿಕ್ಟೋರಿಯಾ ಆಸ್ಪತ್ರೆಯ ವಕೀಲರ ವಾರ್ಡ್

ಕಳೆದ 2 ದಶಕಗಳಿಂದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ 50 ಹಾಸಿಗೆಗಳ ಸಾಮರ್ಥ್ಯದ ವಾರ್ಡ್ ಅನ್ನು ವಕೀಲರಿಗಾಗಿ ಮೀಸಲಿಡಲಾಗಿದೆ. ಈ ಸಂಕಷ್ಟದ ಸಮಯದಲ್ಲಿ ವಾರ್ಡ್ ಅನ್ನು ಕೋವಿಡ್ ವಾರ್ಡ್ ಮಾಡಿದರೆ ಸಹಕಾರಿ ಆಗುತ್ತದೆ ಎಂದು ಅವರು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.

Victoria Hospital
Victoria Hospital

By

Published : May 3, 2021, 6:03 PM IST

ಬೆಂಗಳೂರು:ನಗರದಲ್ಲಿ ಹಲವು ವಕೀಲರು ಕೋವಿಡ್ ಸೋಂಕಿನಿಂದ ನರಳುತ್ತಿದ್ದು, ಆಸ್ಪತ್ರೆಗಳಲ್ಲಿ ಬೆಡ್ ಹಾಗೂ ಚಿಕಿತ್ಸೆ ದೊರೆಯದೇ ಸಾವನ್ನಪ್ಪುತ್ತಿರುವ ಹಿನ್ನೆಲೆಯಲ್ಲಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿರುವ ವಕೀಲರ ವಾರ್ಡ್​ ಅನ್ನು ಕೋವಿಡ್ ವಾರ್ಡ್ ಆಗಿ ಪರಿವರ್ತಿಸಬೇಕು ಎಂದು ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಮಾಜಿ ಉಪಾಧ್ಯಕ್ಷ ಮಲ್ಲೇಶಯ್ಯ ಅವರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಕಳೆದ 2 ದಶಕಗಳಿಂದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ 50 ಹಾಸಿಗೆಗಳ ಸಾಮರ್ಥ್ಯದ ವಾರ್ಡ್ ಅನ್ನು ವಕೀಲರಿಗಾಗಿ ಮೀಸಲಿಡಲಾಗಿದೆ. ಈ ಸಂಕಷ್ಟದ ಸಮಯದಲ್ಲಿ ವಾರ್ಡ್ ಅನ್ನು ಕೋವಿಡ್ ವಾರ್ಡ್ ಮಾಡಿದರೆ, ಸೋಂಕಿತ ವಕೀಲರಿಗೆ ಸಕಾಲದಲ್ಲಿ ಚಿಕಿತ್ಸೆ ಒದಗಿಸಲು ಸಹಕಾರಿ ಆಗುತ್ತದೆ ಎಂದು ಅವರು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.

ವಕೀಲರ ಭವನ ಬಳಸಿಕೊಳ್ಳಲು ಮನವಿ :

ಇದೇ ಸಂದರ್ಭದಲ್ಲಿ, ನಗರದಲ್ಲಿರುವ ವಕೀಲರ ಭವನವನ್ನು ಕೋವಿಡ್ ಕೇಂದ್ರವನ್ನಾಗಿ ಮಾಡಲು ಸಿದ್ಧವಿರುವುದಾಗಿ ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಎ.ಪಿ.ರಂಗನಾಥ್ ಮತ್ತು ಪದಾಧಿಕಾರಿಗಳು ಮುಖ್ಯ ನ್ಯಾಯಮೂರ್ತಿ ಅವರಿಗೆ ತಿಳಿಸಿದ್ದಾರೆ.

ಕೋರಿಕೆ ಪರಿಗಣಿಸಿರುವ ಮುಖ್ಯ ನ್ಯಾಯಮೂರ್ತಿಗಳು ವಕೀಲ ಭವನವನ್ನು ಕೋವಿಡ್ ಕೇಂದ್ರವನ್ನಾಗಿ ಪರಿವರ್ತಿಸಬಹುದೇ, ಅಲ್ಲಿಗೆ ವೈದ್ಯರು, ನರ್ಸ್​ಗಳು ಸೇರಿ ಅಗತ್ಯ ಮೂಲಸೌಕರ್ಯ ಕಲ್ಪಿಸಬಹುದೇ ಎಂಬ ಬಗ್ಗೆ ಪರಿಶೀಲಿಸಿ ಎರಡು ದಿನಗಳಲ್ಲಿ ವರದಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದ್ದಾರೆ.

ನೋಡಲ್ ಅಧಿಕಾರಿ ನೇಮಕ :

ಇನ್ನು ಹೈಕೋರ್ಟ್ ಸೂಚನೆ ಮೇರೆಗೆ ಕೋವಿಡ್ ಸೋಂಕಿತ ವಕೀಲರು ಮತ್ತು ಅವರ ಕುಟುಂದವರ ಚಿಕಿತ್ಸೆಗೆ ನೆರವಾಗಲು ಬಿಬಿಎಂಪಿ ಡಾ.ವೆಂಕಟೇಶ್ ಎಂಬುವರನ್ನು ನೋಡಲ್ ಅಧಿಕಾರಿಯಾಗಿ ನೇಮಿಸಿದೆ. ಈ ನೋಡಲ್ ಅಧಿಕಾರಿ ಕೋವಿಡ್ ಸೋಂಕಿತ ವಕೀಲರು ಮತ್ತು ಅವರ ಕುಟುಂಬದವರಿಗೆ ಹಾಸಿಗೆಗಳನ್ನು ಒದಗಿಸಿಕೊಡುವುದು, ಚಿಕಿತ್ಸೆ, ಆ್ಯಕ್ಸಿಜನ್ ಪೂರೈಕೆ ಮತ್ತಿತರೆ ಅಗತ್ಯತೆಗಳನ್ನು ಒದಗಿಸುವ ಪ್ರಯತ್ನ ಮಾಡುತ್ತಿದ್ದಾರೆ.

ABOUT THE AUTHOR

...view details