ಬೆಂಗಳೂರು:'ಅಂತಾರಾಷ್ಟ್ರೀಯ ಯೋಗ ದಿನಾಚರಣೆ'ಗೂ ಒಂದು ದಿನ ಮುಂಚಿತವಾಗೇ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಎಲ್ಲರ ಗಮನ ಸೆಳೆದಿದ್ದಾರೆ.
70ರ ವಯಸ್ಸಿಲ್ಲೂ ವಾಟಾಳ್ ಹುಮ್ಮಸ್ಸು: ಗಮನ ಸೆಳೆದ ಕನ್ನಡ ಹೋರಾಟಗಾರನ ಯೋಗಾಸನ - undefined
ವಯಸ್ಸು 70 ಆಗಿದ್ದರೂ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಅವರು ಯುವಕರೇ ನಾಚಿಸುವಂತೆ ವಿವಿಧ ಯೋಗ ಭಂಗಿಗಳನ್ನು ಮಾಡಿದ್ದಾರೆ.

ವಾಟಾಳ್ ಯೋಗಾಸನ
70 ವರ್ಷ ವಯಸ್ಸಾಗಿರುವ ವಾಟಾಳ್ ನಾಗರಾಜ್ ಚಿರ ಯುವಕರಂತೆ ವಿವಿಧ ಆಸನಗಳನ್ನು ಹಾಕುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಆರೋಗ್ಯದ ಗುಟ್ಟು ಯೋಗ ಎಂಬುದನ್ನು ಈ ಮೂಲಕ ತೋರಿಸಿರುವ ಅವರು ನಾಡಿನ ಜನತೆಗೆ ಆರೋಗ್ಯ ಭಾಗ್ಯ ಲಭಿಸಬೇಕೆಂದು ಹಾರೈಸಿದರು.
ವಾಟಾಳ್ ಯೋಗಾಸನ