ಕರ್ನಾಟಕ

karnataka

ETV Bharat / briefs

ಗಿಡಗಳ  ಸಂರಕ್ಷಣೆಗೆ ತಡೆಬೇಲಿ ಕೊಡುಗೆ ನೀಡಿದ ಪುತ್ತೂರಿನ ಸಂಘಗಳು - ಪುತ್ತೂರು ಲೆಟೆಸ್ಟ್ ನ್ಯೂಸ್‌

ವಿಶ್ವ ಪರಿಸರ ದಿನದ‌ ನಿಮಿತ್ತ ಪುತ್ತೂರಿನ ಕಿಲ್ಲೆ ಮೈದಾನದ ಆವರಣದಲ್ಲಿ ನೆಡಲಾದ‌ ಗಿಡಗಳ ರಕ್ಷಣೆಗೆ ವಿವಿಧ ಸಂಘಗಳು ತಡೆಬೇಲಿಯನ್ನ ಕೊಡುಗೆಯಾಗಿ ನೀಡಿವೆ.

Putturu
Putturu

By

Published : Jun 6, 2020, 2:40 PM IST

ಪುತ್ತೂರು: ವಿಶ್ವ ಪರಿಸರ ದಿನದ‌ ನಿಮಿತ್ತ ಕಿಲ್ಲೆ ಮೈದಾನದ ಆವರಣದಲ್ಲಿ ನೆಡಲಾದ‌ ಗಿಡಗಳ ರಕ್ಷಣೆಗೆ ವಿವಿಧ ಸಂಘಗಳು ತಡೆಬೇಲಿಯನ್ನ ಕೊಡುಗೆಯಾಗಿ ನೀಡಿದ್ದಾರೆ.

ಪರಿಸರ ದಿನದ ನಿಮಿತ್ತ ನಿನ್ನೆ ನಗರಸಭೆ ಸದಸ್ಯರು ಕಿಲ್ಲೆ ಮೈದಾನದಲ್ಲಿ ಗಿಡಗಳನ್ನು ನೆಟ್ಟಿದ್ದರು. ಅವುಗಳ ಸಂರಕ್ಷಣೆಗೆ ಸಂತೆ ವ್ಯಾಪಾರಸ್ಥರ ಸಂಘ, ಸಿಟಿ ಫ್ರೆಂಡ್ಸ್ ಹಾಗೂ ಅಮರ್ ಅಕ್ಬರ್ ಅಂತೋನಿ ಕ್ರೀಡಾ ಸಮಿತಿ ವತಿಯಿಂದ ತಡೆಬೇಲಿಯನ್ನ‌ ಕೊಡುಗೆಯಾಗಿ‌ ನೀಡಿದರು.

ಸಂತೆ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಅಬ್ದುಲ್‌ ಹಮೀದ್ ಡಿ.ಕೆ.ಸಂಘಟನಾ ಕಾರ್ಯದರ್ಶಿ ಬಿ.ಹೆಚ್. ಅಬ್ದುಲ್ ರಜಾಕ್ ತಡೆ ಬೇಲಿಯನ್ನು ನಗರ ಸಭಾ ಪೌರಾಯುಕ್ತೆ ರೂಪಾ ಶೆಟ್ಟಿ ಅವರಿಗೆ ಹಸ್ತಾಂತರಿಸಿದರು.

ಈ ವೇಳೆ, ಹಿರಿಯ ಆರೋಗ್ಯ ನಿರೀಕ್ಷಕಿ ಶ್ವೇತಾ ಕಿರಣ್, ಸಿಬ್ಬಂದಿ ಹಾಗೂ ಸಿಟಿ ಫ್ರೆಂಡ್ಸ್ ಮತ್ತು ಅಮರ್ ಅಕ್ಬರ್ ಅಂತೋನಿ ಕ್ರೀಡಾ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.

ABOUT THE AUTHOR

...view details