ಕರ್ನಾಟಕ

karnataka

ETV Bharat / briefs

ಉಪ್ಪಿ ಸಿಎಂ ಆದ್ರೆ ವಿಧಾನಸೌಧ ಏನಾಗುತ್ತೆ?ಅವರೇ ಹೇಳ್ತಾರೆ ನೋಡಿ! - undefined

ವಿಧಾನಸೌಧವನ್ನು ಒಂದೊಳ್ಳೆ ಯೂನಿವರ್ಸಿಟಿ ಮಾಡೋಣ. ಮಕ್ಕಳಿಗೆ ವೀಕೇಂಡ್‌ನಲ್ಲಿ ಫ್ಯಾಮಿಲಿ ಜೊತೆ ಬಂದು ಎಂಜಾಯ್ ಮಾಡುವಂಥ ಆಕರ್ಷಕ ತಾಣ ಮಾಡಬಹುದು‌ ಎಂದರು. ಅಷ್ಟೇ ಏಕೆ, ಕಲ್ಚರಲ್ ಸೆಂಟರ್‌ ಮಾಡಬಹುದು ಎಂದು ಅಭಿಪ್ರಾಯಪಟ್ಟರು.

ಉಪೇಂದ್ರ ಮಾತನಾಡಿದರು.

By

Published : Jun 2, 2019, 4:54 PM IST

ಬೆಂಗಳೂರು:ಪ್ರಜಾಕೀಯ ಎಂಬ ಪರಿಕಲ್ಪನೆಯೊಂದಿಗೆ ರಾಜಕೀಯ ಕ್ಷೇತ್ರಕ್ಕೆ ಬಂದಿರುವ ಕನ್ನಡದ 'ಬುದ್ದಿವಂತ' ರಿಯಲ್ ಸ್ಟಾರ್ ಉಪೇಂದ್ರ ಎಲ್ಲೇ ಹೋದರೂ ಪ್ರಜಾಕೀಯ ಮಂತ್ರ ಜಪಿಸುತ್ತಿದ್ದಾರೆ. ಇವತ್ತು ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ಅವರು ತಮ್ಮ ಭಿನ್ನ ದೃಷ್ಟಿಕೋನದ ರಾಜಕೀಯ ಪರಿಕಲ್ಪನೆಯ ಪ್ರಸ್ತಾಪ ಮಾಡಿದರು.

ಖಾಸಗಿ ಕಾರ್ಯಕ್ರಮಕ್ಕೆ ಅತಿಥಿಯಾಗಿ ಬಂದಿದ್ದ ಉಪೇಂದ್ರ ಅವರನ್ನು ಕಾರ್ಯಕ್ರಮ ನಿರೂಪಣೆ ಮಾಡ್ತಿದ್ದ ನಿರೂಪಕರು ಉಪೇಂದ್ರ ಅವರು ಸಿನಿಮಾ ಕ್ಷೇತ್ರದಲ್ಲಿ ದೊಡ್ಡ ಯಶಸ್ಸು ಗಳಿಸಿದ್ದಾರೆ. ಈಗ ರಾಜಕೀಯಕ್ಕೂ ಎಂಟ್ರಿ ಕೊಟ್ಟಿದ್ದಾರೆ. ಉಪೇಂದ್ರ ಅವರು ಈ ರಾಜ್ಯದ ಮುಖ್ಯಮಂತ್ರಿ ಆಗಲಿ. ಉಪೇಂದ್ರ ಅವರ ಆ ಕಾರ್ಯಕ್ರಮದ ನಿರೂಪಣೆಯನ್ನು ನಾನೇ ಮಾಡುವಂತಾಗಲಿ ಎಂದರು.

ಈ ಮಾತಿಗೆ ಪ್ರತಿಕ್ರಿಯಿಸಿದ ಉಪೇಂದ್ರ, ನಮ್ಮ ಜನ ಇನ್ನೂ ರಾಜಕೀಯದ ಮೈಂಡ್‌ಸೆಟ್‌​ನಿಂದ ಹೊರಗೆ ಬಂದಿಲ್ಲ. ನಾಯಕರು, ಅವರ ವೈಭವದ ಸಭೆ ಸಮಾರಂಭಗಳು ಬೇಕು ಎಂದು ಹೇಳುತ್ತಾರೆ. ಅದರೆ ನಾನು ಇದರ ವಿರುದ್ದವೇ ಹೋರಾಟ ಮಾಡ್ತಿರೋದು. ಜನರು ನೀಡುವ ಸಂಬಳ ತೆಗೆದುಕೊಂಡು ಕಾರ್ಮಿಕರ ರೀತಿ ಕೆಲಸ ಮಾಡುವ ಜನಪ್ರತಿನಿಧಿಗಳು ನಮಗೆ ಬೇಕು ಎಂದರು.

ಒಂದು ವೇಳೆ‌ ನಾನು ಮುಖ್ಯಮಂತ್ರಿಯಾದರೆ ಸಭೆ ಸಮಾರಂಭಗಳು ಇರಲ್ಲ. ಅಷ್ಟೇ ಏಕೆ,ನಾಯಕರೂ ಇರಲ್ಲ.ಚುನಾವಣೆಯಲ್ಲಿ ಪ್ರಜೆಗಳಿಂದ ಚುನಾಯಿತರಾದವರು ನಿಮ್ಮ ಕ್ಷೇತ್ರಗಳಲ್ಲೇ ಕೆಲಸ ಮಾಡುತ್ತಾರೆ. ವಿಧಾನಸೌಧವನ್ನು ಒಂದೊಳ್ಳೆ ಯೂನಿವರ್ಸಿಟಿ ಮಾಡೋಣ. ಮಕ್ಕಳಿಗೆ ವೀಕೇಂಡ್‌ನಲ್ಲಿ ಫ್ಯಾಮಿಲಿ ಜೊತೆ ಬಂದು ಎಂಜಾಯ್ ಮಾಡುವಂತ ತಾಣ ಮಾಡಬಹುದು‌ ಎಂದರು.

ರಾಜಕಾರಣಿಗಳು ಜನಸೇವಕ‌, ನಾಯಕ ಎಂದೆಲ್ಲಾ ಹೇಳಿಕೊಳ್ಳುತ್ತಾರೆ. ಅದರೆ ನಮಗೆ ಬೇಕಿರುವುದು ಕಾರ್ಮಿಕರೇ ಹೊರತು ಜನ‌ನಾಯಕರಲ್ಲ, ಜನ‌ಸೇವಕರೂ ಅಲ್ಲ ಎಂದು ಹೇಳಿದರು. ಇದು ನಮ್ಮ ಪ್ರಜಾಕೀಯ ಪಕ್ಷದ ಕಲ್ಪನೆ. ಆಡಳಿತವು ಜನರ ಬಳಿಗೆ ಬಂದು ಕೆಲಸ ಮಾಡಬೇಕು. ಯಾವಾಗಲೋ ಒಂದೆರಡು ಸಭೆ ಮಾಡಲು ವಿಧಾನಸೌಧ ಏಕೆ ಬೇಕು? ಎಂದು ಉಪೇಂದ್ರ ತಮ್ಮ ಪ್ರಜಾಕೀಯ ಪರಿಕಲ್ಪನೆಯನ್ನು ವಿವರಿಸುತ್ತಾ ಹೋದರು.

For All Latest Updates

TAGGED:

ABOUT THE AUTHOR

...view details