ಕರ್ನಾಟಕ

karnataka

ETV Bharat / briefs

ಜನರು ಅನಗತ್ಯವಾಗಿ ರೆಮ್​​​ಡಿಸಿವಿರ್ ಹಿಂದೆ ಬೀಳಬಾರದು: ಸಚಿವ ಸುಧಾಕರ್​

ಈ ಹಿಂದೆ ಕೊರೊನಾ ಸೋಂಕಿತರು ಗುಣಮುಖರಾಗಿದ್ದು, ಅವರಲ್ಲಿ ಯಾರೊಬ್ಬರು ರೆಮ್​ಡಿಸಿವಿರ್ ಇಂಜೆಕ್ಷನ್ ತೆಗೆದುಕೊಂಡಿಲ್ಲ. ಅನಗತ್ಯವಾಗಿ ಜನರು ರೆಮ್​ ಡಿಸಿವಿರ್ ಹಿಂದೆ ಬೀಳಬಾರದು ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ಮನವಿ ಮಾಡಿದರು.

Unnecessarily ordinary people should not fall behind RemDiver
Unnecessarily ordinary people should not fall behind RemDiver

By

Published : May 1, 2021, 2:58 PM IST

Updated : May 1, 2021, 7:04 PM IST

ಕಲಬುರಗಿ: ಕಳೆದ ವರ್ಷ ಹನ್ನೊಂದು ಲಕ್ಷ ಕೊರೊನಾ ಸೋಂಕಿತರು ಗುಣಮುಖರಾಗಿದ್ದು, ಇವರಲ್ಲಿ ಯಾರೊಬ್ಬರು ರೆಮ್​​ಡಿಸಿವಿರ್ ಇಂಜೆಕ್ಷನ್ ತೆಗೆದುಕೊಂಡಿಲ್ಲ. ಅನಗತ್ಯವಾಗಿ ಜನರು ರೆಮ್​ಡಿಸಿವಿರ್ ಹಿಂದೆ ಬೀಳಬಾರದು ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ಹೇಳಿದರು.

ನಗರದಲ್ಲಿ ಕೊವೀಡ್-19 ಸಂಬಂಧ ನಡೆದ ಸಭೆ ನಂತರ ಮಾತನಾಡಿದ ಅವರು, ಸದ್ಯ ರಾಜ್ಯದಲ್ಲಿ ಸಾವಿನ ಪ್ರಮಾಣ ಶೇ. 0.6ರಷ್ಟಿದೆ. ಕಳೆದ ವರ್ಷ 1.3ರಷ್ಟಿತ್ತು. ಆದರೆ ಈ ವರ್ಷ ಹೆಚ್ಚು ಜನರಿಗೆ ಸೋಂಕು ಹರಡುತ್ತಿರುವದರಿಂದ ಎಲ್ಲಡೆ ಭಯದ ವಾತಾವರಣ ನಿರ್ಮಾಣವಾಗಿದೆ. ಪ್ರತಿಯೊಬ್ಬ ಸೋಂಕಿತರಿಗೆ ರೆಮ್​​ಡಿಸಿವಿರ್ ಅಗತ್ಯವಿಲ್ಲ. ರೋಗಿಯನ್ನು ಬಿಟ್ಟು ಬೇರೆಯವರ ಹೆಸರಲ್ಲಿ ವೈದ್ಯರು ರೆಮ್​ಡಿಸಿವಿರ್ ಪಡೆಯಬಾರದು. ಆ ರೀತಿ ಕಂಡು ಬಂದ್ರೆ ಆಸ್ಪತ್ರೆ ಲೈಸನ್ಸ್ ರದ್ದು ಮಾಡಲಾಗುತ್ತದೆ ಎಂದು ಎಚ್ಚರಿಸಿದರು.

ಜನರು ಅನಗತ್ಯವಾಗಿ ರೆಮ್​​​ಡಿಸಿವಿರ್ ಹಿಂದೆ ಬೀಳಬಾರದು: ಸಚಿವ ಸುಧಾಕರ್​

ಇನ್ನು ಮಹಾರಾಷ್ಟ್ರದಿಂದ ಬಂದವರಿಂದವಲೇ ಜಿಲ್ಲೆಯಲ್ಲಿ ಕೊರೊನಾ ಹೆಚ್ಚಾಗಿದೆ. ಹೋಮ್ ಐಸೋಲೇಷನ್​ನಲ್ಲಿರೋರಿಗೆ ಮೆಡಿಕಲ್ ಕಿಟ್ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಸೋಂಕಿತರ ಜೊತೆ ವೈದ್ಯಕೀಯ ಸಮಾಲೋಚನೆ ಮಾಡಲು ಅಧಿಕಾರಿ, ಸಿಬ್ಬಂದಿಗೆ ತಿಳಿಸಲಾಗಿದೆ. ಸೋಂಕಿತರ ಮನೆಗೆ ಹೋಗಿ ಅವರಿಗೆ ಮಾರ್ಗದರ್ಶನ ನೀಡಲು‌ ಸೂಚನೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ಕೊರೊನಾ ಚೈನ್ ಲಿಂಕ್ ಕಟ್ ಮಾಡಲು ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಎಲ್ಲಾ ಮೆಡಿಕಲ್ ಕಾಲೇಜು ಇರುವ ಆಸ್ಪತ್ರೆಯವರು ಶೇಕಡಾ ಎಪ್ಪತ್ತೈದರಷ್ಟು ಕೋವಿಡ್ ಬೆಡ್ ಸರ್ಕಾರಕ್ಕೆ ನೀಡಬೇಕು. ರೆಮ್​ಡಿಸಿವಿರ್ ಕಾಳಸಂತೆಯಲ್ಲಿ ಮಾರಾಟ ಮಾಡಿದ್ರೆ ಅವರನ್ನು ಜೈಲಿಗೆ ಕಳುಹಿಸಲು ಸೂಚನೆ ನೀಡಲಾಗಿದೆ ಎಂದರು.

Last Updated : May 1, 2021, 7:04 PM IST

ABOUT THE AUTHOR

...view details