ETV Bharat Karnataka

ಕರ್ನಾಟಕ

karnataka

ETV Bharat / briefs

ಆಂಧ್ರ ಪ್ರದೇಶ ನೂತನ ಗವರ್ನರ್​​​ ಸುಷ್ಮಾ​?... ಟ್ವೀಟ್​​​ ಮಾಡಿ ಡಿಲೀಟ್​​​​​​​​ ಮಾಡಿದ ಕೇಂದ್ರ ಸಚಿವ! - ಕೇಂದ್ರ ಸಚಿವ

ಅನಾರೋಗ್ಯದ ಕಾರಣ ಈ ಸಲದ ಲೋಕಸಭಾ ಚುನಾವಣೆಯಿಂದ ಸುಷ್ಮಾ ಸ್ವರಾಜ್​ ಹೊರಗುಳಿದಿದ್ದರು. ಇದರ ಮಧ್ಯೆ ಅವರು ಆಂಧ್ರ ಪ್ರದೇಶದ ಗವರ್ನರ್​ ಆಗಿ ಆಯ್ಕೆಯಾಗಿದ್ದಾರೆ ಎಂಬ ವದಂತಿ ಹಬ್ಬಿದೆ.

ಸುಷ್ಮಾ ಸ್ವರಾಜ್​
author img

By

Published : Jun 10, 2019, 11:10 PM IST

Updated : Jun 10, 2019, 11:24 PM IST

ನವದೆಹಲಿ:ಕೇಂದ್ರದ ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್​ ಆಂಧ್ರ ಪ್ರದೇಶದ ನೂತನ ರಾಜ್ಯಪಾಲರಾಗಿ ಆಯ್ಕೆಯಾಗಿದ್ದಾರೆಂದು ಕೇಂದ್ರ ಸಚಿವ ಹರ್ಷವರ್ಧನ್​ ಟ್ವೀಟ್​ ಮಾಡಿ ಕೆಲ ನಿಮಿಷಗಳಲ್ಲಿ ಡಿಲೀಟ್​ ಮಾಡಿದ್ದಾರೆ.

ತಮ್ಮ ಟ್ವಿಟರ್​ ಅಕೌಂಟ್​​ನಿಂದ ಬಿಜೆಪಿ ಹಿರಿಯ ಮುಖಂಡೆ, ನನ್ನ ದೀದಿ, ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್​ ಅವರು ಆಂಧ್ರ ಪ್ರದೇಶದ ರಾಜ್ಯಪಾಲರಾಗಿ ಆಯ್ಕೆಯಾಗಿದ್ದು, ಅವರಿಗೆ ಅಭಿನಂದನೆಗಳು. ಎಲ್ಲ ಕ್ಷೇತ್ರಗಳಲ್ಲೂ ಅಪಾರ ಅನುಭವ ಹೊಂದಿರುವ ನಿಮ್ಮ ಸೇವೆಯಿಂದ ಆಂಧ್ರ ಪ್ರದೇಶದ ಜನರು ಹೆಮ್ಮೆ ಪಡುವಂತೆ ಆಗಲಿ ಎಂದು ಬರೆದುಕೊಂಡಿದ್ದರು. ಆದರೆ ತದನಂತರ ಅದನ್ನ ಡಿಲೀಟ್​ ಮಾಡಿದ್ದಾರೆ.

ಈ ಹಿಂದೆ ಮೋದಿ ಕ್ಯಾಬಿನೆಟ್​ನಲ್ಲಿ ಸುಷ್ಮಾ ಸ್ವರಾಜ್​ ಕೇಂದ್ರ ವಿದೇಶಾಂಗ ಸಚಿವೆಯಾಗಿ ಸೇವೆ ಸಲ್ಲಿಸಿದ್ದರು. ಆದರೆ 2019ರ ಲೋಕಸಭಾ ಚುನಾವಣೆಯಲ್ಲಿ ಅನಾರೋಗ್ಯದ ಕಾರಣ ಸ್ಪರ್ಧೆಯಿಂದ ದೂರ ಉಳಿದಿದ್ದರು. ಈಗಾಗಲೇ ಇ.ಎಸ್.ಎಲ್.ನರಸಿಂಹನ್ ಆಂಧ್ರ ಪ್ರದೇಶದ ರಾಜ್ಯಪಾಲರಾಗಿದ್ದಾರೆ.

ಟ್ವೀಟ್​ ಮೂಲಕ ಸುಷ್ಮಾ ಸ್ಪಷ್ಟನೆ

ಇದೇ ವಿಷಯಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿರುವ ಸುಷ್ಮಾ ಸ್ವರಾಜ್​, ಆಂಧ್ರ ಪ್ರದೇಶದ ಗವರ್ನರ್​ ಆಗಿ ನಾನು ಆಯ್ಕೆಯಾಗಿದ್ದೇನೆ ಎಂಬುದು ಸುಳ್ಳು. ಅದರಲ್ಲಿ ಯಾವುದೇ ಹುರುಳಿಲ್ಲ ಎಂದು ಬರೆದುಕೊಂಡಿದ್ದಾರೆ.

Last Updated : Jun 10, 2019, 11:24 PM IST

ABOUT THE AUTHOR

...view details