ಕರ್ನಾಟಕ

karnataka

ETV Bharat / briefs

ಶಾಸಕ ಉಮೇಶ್​ ಜಾಧವ್​​​ ರಾಜೀನಾಮೆ - ಬೆಂಗಳೂರು

ಚಿಂಚೋಳಿ ಶಾಸಕ ಉಮೇಶ್ ಜಿ. ಜಾಧವ್ ಶಾಸಕ ಸ್ಥಾನಕ್ಕೆ ಸ್ಪೀಕರ್ ರಮೇಶ್ ಕುಮಾರ್ ಮನೆಗೆ ಭೇಟಿ ನೀಡಿ ರಾಜೀನಾಮೆ ನೀಡಿದ್ದಾರೆ.

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಉಮೇಶ್​ ಜಾಧವ್.​​​

By

Published : Mar 4, 2019, 1:21 PM IST

ಬೆಂಗಳೂರು/ಕೋಲಾರ: ಕಲಬುರಗಿಯ ಚಿಂಚೋಳಿ ಶಾಸಕ ಉಮೇಶ್ ಜಿ. ಜಾಧವ್ ಶಾಸಕ ಸ್ಥಾನಕ್ಕೆ ಇಂದು ರಾಜೀನಾಮೆ ನೀಡಿದ್ದಾರೆ.

ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕು ಅಡ್ಡಗಲ್ ಗ್ರಾಮದ ಸ್ಪೀಕರ್ ರಮೇಶ್ ಕುಮಾರ್ ಮನೆಗೆ ಭೇಟಿ ನೀಡಿ ರಾಜೀನಾಮೆ ನೀಡಿದ್ದಾರೆ. ಇಂದು‌ ಬೆಳಿಗ್ಗೆ ರಾಜೀನಾಮೆ ನೀಡಿದ ಚಿಂಚೋಳಿ ಶಾಸಕ ಉಮೇಶ್ ಯಾಧವ್ ಮಾರ್ಚ್ 6ರಂದು ಕಲಬುರಗಿಯಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಧಾನಿ ಮೋದಿ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾಗುವ ಸಾಧ್ಯತೆ ಇದೆ.

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಉಮೇಶ್​ ಜಾಧವ್.​​​
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಉಮೇಶ್​ ಜಾಧವ್.​​​

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಲಬುರಗಿಯಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಆಸಕ್ತಿ ಹೊಂದಿರುವ ಉಮೇಶ್ ಜಾಧವ್ 90 ಸಾವಿರದಷ್ಟಿರುವ ಲಂಬಾಣಿ ಮತದಾರರನ್ನು ನಂಬಿ ಕಣಕ್ಕಿಳಿಯಲಿದ್ದಾರೆ.

ಇಂದು ಸಂಜೆಯ ವೇಳೆಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರನ್ನು ಭೇಟಿ ಮಾಡಲಿರುವ ಉಮೇಶ್ ಯಾಧವ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೂ ರಾಜೀನಾಮೆ ನೀಡಲಿದ್ದಾರೆ ಎಂದು ತಿಳಿದು ಬಂದಿದೆ.

ABOUT THE AUTHOR

...view details