ಸಂಗ್ರೂರು( ಪಂಜಾಬ್):ಕಳೆದ ಐದು ದಿನಗಳ ಹಿಂದೆ ಬೋರ್ವೆಲ್ಗೆ ಬಿದ್ದಿದ್ದ 2 ವರ್ಷಗಳ ಮಗು ಫತೇವೀರ್ ಸಿಂಗ್ ರಕ್ಷಣಾ ಕಾರ್ಯಾಚರಣೆ ಯಶಸ್ವಿಯಾದರೂ, ಮಗು ಮಾತ್ರ ಮೇಲೆ ಬರುತ್ತಿದ್ದಂತೆ ಕೊನೆಯುಸಿರೆಳೆದಿದೆ. ಸತತ 109 ಗಂಟೆಗಳ ಕಾಲ ಎನ್ಡಿಆರ್ಎಫ್ ಪಡೆ ಮಗುವಿನ ರಕ್ಷಣಾ ಕಾರ್ಯಾಚರಣೆ ಮಾಡಿತಾದರೂ, ಆಸ್ಪತ್ರೆಗೆ ಮಗು ಸಾಗಿಸುತ್ತಿದ್ದಂತೆ ಮೃತಪಟ್ಟಿತು.
ಇಂದು ಬೆಳಗಿನ ಜಾವ 5:12 ಗಂಟೆ ವೇಳೆಗೆ ಮಗುವನ್ನ ಎನ್ಡಿಆರ್ಎಫ್ ಪಡೆ ರಕ್ಷಣೆ ಮಾಡುವಲ್ಲಿ ಯಶಸ್ವಿ ಆಗಿತ್ತು. ತಕ್ಷಣ ಮಗುವನ್ನ ಆಸ್ಪತ್ರೆಗೂ ರವಾನೆ ಮಾಡಿತ್ತು. ಆದರೆ, ಮಗು ಕೊನೆಗೂ ಬದುಕುಳಿಯಲಿಲ್ಲ.