ಬೆಂಗಳೂರು :ರಾತ್ರಿ ಹೊತ್ತಿನಲ್ಲಿ ದ್ವಿಚಕ್ರ ವಾಹನ ಕಳವು ಮಾಡುತ್ತಿದ್ದ ವ್ಯಕ್ತಿಯನ್ನು ಬ್ಯಾಟರಾಯನಪುರ ಪೊಲೀಸರು ಬಂಧಿಸಿದ್ದಾರೆ. ಆರೋಪಿಯಿಂದ 3 ಲಕ್ಷ ರೂ. ಮೌಲ್ಯದ 6 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ದ್ವಿಚಕ್ರ ವಾಹನ ಕಳ್ಳತನ : ಆರೋಪಿಯನ್ನ ಬಂಧಿಸಿದ ಬ್ಯಾಟರಾಯನಪುರ ಪೊಲೀಸರು - Bike robbery in Bengaluru
ದ್ವಿಚಕ್ರ ವಾಹನ ಕಳ್ಳತನ ಮಾಡುತ್ತಿದ್ದ ಖದೀಮನನ್ನು ಬ್ಯಾಟರಾಯನಪುರ ಪೊಲೀಸರು ಬಂಧಿಸಿದ್ದು, 3 ಲಕ್ಷ ರೂ. ಮೌಲ್ಯದ 6 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ..

ವಸೀಮ್ ಖಾನ್ ದ್ವಿಚಕ್ರ ವಾಹನ ಕಳ್ಳ
ಪಾದರಾಯನಪುರದ ವಸೀಮ್ ಖಾನ್ (21) ಬಂಧಿತ ಆರೋಪಿ. ಆರೋಪಿಯು ದೀಪಾಂಜಲಿ ನಗರದ 2ನೇ ಅಡ್ಡರಸ್ತೆ 6ನೇ ಮುಖ್ಯರಸ್ತೆಯ ಮನೆಯೊಂದರ ಮುಂದೆ ನಿಂತಿದ್ದ ದ್ವಿಚಕ್ರ ವಾಹನ ಕಳ್ಳತನ ಮಾಡಿದ್ದ.
ವಾಹನ ಮಾಲೀಕರು ಈ ಸಂಬಂಧ ದೂರು ನೀಡಿದ್ದರು. ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಯನ್ನು ಜೈಲಿಗಟ್ಟಿದ್ದಾರೆ. ಆರೋಪಿ ಬಂಧನದಿಂದ ಜೆಜೆನಗರ, ಶ್ರೀರಾಂಪುರ, ಜೆಸಿನಗರ ಪೊಲೀಸ್ ಠಾಣೆಯ ಕಳವು ಪ್ರಕರಣಗಳು ಬೆಳಕಿಗೆ ಬಂದಿವೆ.