ಹಾಸನ: ಮುದ್ದು ಮುದ್ದಾದಚಿರತೆ ಮರಿಗಳು ಆಹಾರಕ್ಕಾಗಿ ಹಂಬಲಿಸುತ್ತಿದ್ದ ವೇಳೆ, ಕೆಲಸ ಮಾಡುತ್ತಿದ್ದ ಸ್ಥಳೀಯರೊಬ್ಬರು ಚಿರತೆ ಮರಿಗಳನ್ನು ನೋಡಿ ತಕ್ಷಣ ಪೊಲೀಸ್ ಠಾಣೆಗೆ ವಿಚಾರ ಮುಟ್ಟಿಸಿದ್ದಾರೆ.
ಕಬ್ಬಿನ ಗದ್ದೆಯಲ್ಲಿ ಸಿಕ್ಕವು ಮುದ್ದು ಮುದ್ದಾದ ಎರಡು ಚಿರತೆ ಮರಿಗಳು - undefined
ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಹಳೆಕೋಟೆ ಹೋಬಳಿಯ ಕಾಮೇನಹಳ್ಳಿ ಗ್ರಾಮದ ಕಬ್ಬಿನಗದ್ದೆಯಲ್ಲಿ ಎರಡು ಚಿರತೆ ಮರಿಗಳು ಸಿಕ್ಕಿವೆ.
ಕಬ್ಬಿನ ಗದ್ದೆಯಲ್ಲಿ ಸಿಕ್ಕ ಎರಡು ಚಿರತೆ ಮರಿಗಳು
ಸ್ಥಳಕ್ಕೆ ಭೇಟಿ ನೀಡಿ ಪೊಲೀಸರು ಚಿರತೆ ಮರಿಗಳ ರಕ್ಷಣೆ ಮಾಡಿ, ಹಿರಿಯ ಅಧಿಕಾರಿಗಳ ಗಮನಕ್ಕೆ ತಂದ ಬಳಿಕ ಡಿವೈಎಸ್ಪಿ ಲಕ್ಷ್ಮೇಗೌಡರ ಸಲಹೆ ಮೇರೆಗೆ, ವೈದ್ಯಕೀಯ ತಪಾಸಣೆ ಮಾಡಿಸಿದ್ದಾರೆ. ತಪಾಸಣೆಯಲ್ಲಿ ಒಂದು ಗಂಡು, ಒಂದು ಹೆಣ್ಣು ಚಿರತೆ ಮರಿ ಎಂದು ತಿಳಿದು ಬಂದಿದೆ.
ಅವುಗಳ ಸುರಕ್ಷತೆಗಾಗಿ ಕ್ರಮ ಕೈಗೊಳ್ಳುವಂತೆ ವಲಯ ಅರಣ್ಯಾಧಿಕಾರಿಗೆ ಪತ್ರ ಬರೆದ ಹಿನ್ನೆಲೆ, ವಲಯ ಅರಣ್ಯಧಿಕಾರಿ ರಂಗಸ್ವಾಮಿ ಮರಿಗಳನ್ನು ವಶಕ್ಕೆ ಪಡೆದಿದ್ದು, ಬಳಿಕ ಮೈಸೂರು ಮೃಗಾಲಯಕ್ಕೆ ಕಳುಹಿಸುವುದಾಗಿ ತಿಳಿಸಿದ್ದಾರೆ.
Last Updated : Jun 18, 2019, 4:58 AM IST