ಕರ್ನಾಟಕ

karnataka

ETV Bharat / briefs

ಐಸ್‌ಕ್ರೀಮ್​ನಲ್ಲಿ ಅಡಗಿಸಿಟ್ಟ ಬಾಂಬ್ ಸ್ಫೋಟ.. ಇಬ್ಬರು ಮಕ್ಕಳಿಗೆ ಗಾಯ - ಬಾಂಬ್ ಸ್ಪೋಟಕ್ಕೆ ಇಬ್ಬರು ಮಕ್ಕಳಿಗೆ ಗಾಯ

ಇದು ಚುನಾವಣೆಯ ಸಮಯದಲ್ಲಿ ಸಂಘರ್ಷ ಏರ್ಪಡುವ ಕ್ಷೇತ್ರವಾಗಿದೆ. ಐಸ್ ಕ್ರೀಮ್​ನಲ್ಲಿ ಬಾಂಬ್ ಇಟ್ಟಿದ್ದು, ತನಿಖೆ ಆರಂಭಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ..

kannur
kannur

By

Published : May 4, 2021, 4:48 PM IST

ಕಣ್ಣೂರು(ಕೇರಳ) :ಇಲ್ಲಿನ ಇರಿಟ್ಟಿ ಪಾದಿಕಾಚಲ್‌ ಎಂಬಲ್ಲಿ ಬಾಂಬ್ ಸ್ಫೋಟಗೊಂಡು ಒಂದೂವರೆ ವರ್ಷದ ಬಾಲಕ ಸೇರಿ ಇಬ್ಬರು ಮಕ್ಕಳು ಗಾಯಗೊಂಡ ಘಟನೆ ನಡೆದಿದೆ.

ಸಹೋದರರಾದ ಮುಹಮ್ಮದ್ ಅಮೀನ್ (5) ಮತ್ತು ಮುಹಮ್ಮದ್ ರಾಡೆ (ಒಂದೂವರೆ ವರ್ಷ) ಗಾಯಗೊಂಡಿದ್ದಾರೆ. ಗಾಯಾಳು ಸಹೋದರರು ಹೊರಗಿನಿಂದ ಐಸ್ ಕ್ರೀಮ್ ಕಪ್‌ ಕೊಂಡು ತಂದಿದ್ದರು.ಮನೆಯಲ್ಲಿ ಆಡುತ್ತಿರುವಾಗ ಈ ಸ್ಫೋಟವಾಗಿದೆ.

ಮೊಹಮ್ಮದ್ ಅಮೀನ್ ಗಂಭೀರವಾಗಿ ಗಾಯಗೊಂಡಿದ್ದು, ಪರಿಯಾರಂ ವೈದ್ಯಕೀಯ ಕಾಲೇಜಿಗೆ ದಾಖಲಾಗಿದ್ದಾರೆ. ಇದು ಚುನಾವಣೆಯ ಸಮಯದಲ್ಲಿ ಸಂಘರ್ಷ ಏರ್ಪಡುವ ಕ್ಷೇತ್ರವಾಗಿದೆ. ಐಸ್ ಕ್ರೀಮ್​ನಲ್ಲಿ ಬಾಂಬ್ ಇಟ್ಟಿದ್ದು, ತನಿಖೆ ಆರಂಭಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ABOUT THE AUTHOR

...view details