ಕರ್ನಾಟಕ

karnataka

ETV Bharat / briefs

ಕಾರವಾರದಲ್ಲಿ ಬೈಕ್-ಟೆಂಪೋ ಮುಖಾಮುಖಿ.. ಸ್ಥಳದಲ್ಲಿಯೇ ಸವಾರರಿಬ್ಬರ ದುರ್ಮರಣ - driver escape

ಕಾರವಾರದ ಹತ್ತಿರದ 66ರ ರಾಷ್ಟ್ರೀಯ ಹೆದ್ದಾರಿಯಲ್ಲಿ ಟೆಂಪೋ ಹಾಗೂ ಬೈಕ್​ ಮುಖಾಮುಖಿಯಾಗಿದ್ದು, ಬೈಕ್​ ಸವಾರರ ತಲೆಗೆ ಪೆಟ್ಟು ಬಿದ್ದು ಸ್ಥಳದಲ್ಲೇ ಇಬ್ಬರೂ ಮೃತಪಟ್ಟಿದ್ದಾರೆ.

ಅಪಘಾತಕ್ಕೀಡಾದ ವಾಹನ

By

Published : Jun 2, 2019, 5:49 PM IST

ಕಾರವಾರ : ಬೈಕ್ ಹಾಗೂ ಟೆಂಪೋ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸವಾರರಿಬ್ಬರೂ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

ರಸ್ತೆ ಅಪಘಾತದಲ್ಲಿ ಮೃತಪಟ್ಟ ಬೈಕ್​ ಸವಾರರು

ಇವತ್ತು ರಾಷ್ಟ್ರೀಯ ಹೆದ್ದಾರಿ 66ರ ಭಟ್ಕಳ ತಾಲೂಕಿನ ಬಸ್ತಿ ತೆರ್ನಮಕ್ಕಿಯಲ್ಲಿ ಈ ಘಟನೆ ಸಂಭವಿಸಿದೆ. ತಾಲೂಕಿನ ಅಳ್ವೇಕೋಡಿ ಸಣಭಾವಿಯ ಗಣೇಶ ನಾಯ್ಕ್ (28) ಹಾಗೂ ಕೃಷ್ಣ ನಾಯ್ಕ್(55) ಮೃತ ದುರ್ದೈವಿಗಳು.

ಅಪಘಾತದ ರಭಸಕ್ಕೆ ಸವಾರರಿಬ್ಬರೂ ಟೆಂಪೋ ಮೇಲೆ ಬಿದ್ದಿದ್ದಾರೆ. ತಲೆಗೆ ಗಂಭೀರ ಪೆಟ್ಟಾಗಿ ಸ್ಥಳದಲ್ಲೆ ಅಸುನೀಗಿದ್ದಾರೆ. ಘಟನೆ ಬಳಿಕ ಟೆಂಪೋ ಚಾಲಕ ವಾಹನ ಬಿಟ್ಟು ಪರಾರಿಯಾಗಿದ್ದಾನೆ. ಈ ಬಗ್ಗೆ ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details