ಕರ್ನಾಟಕ

karnataka

ETV Bharat / briefs

ಗ್ರಾ.ಪಂ ಚುನಾವಣೆ: ಕಾಣೆಯಾದ ಮತಪತ್ರ

ಬಾಗಲಕೋಟೆಯ ಹುನಗುಂದ ತಾಲೂಕಿನ ವಡಗೇರ ಗ್ರಾಮ ಪಂಚಾಯಿತಿಯಲ್ಲಿ ನಡೆದ ಚುನಾವಣೆಯಲ್ಲಿ ಎರಡು ಮತ ಪತ್ರಗಳು ಕಾಣೆಯಾಗಿ ಅಧಿಕಾರಿಗಳ ತಲೆ ಬಿಸಿಗೆ ಕಾರಣವಾಯಿತು.

ಮತಪತ್ರ

By

Published : Jun 1, 2019, 12:38 AM IST

ಬಾಗಲಕೋಟೆ: ಜಿಲ್ಲೆಯ ಹುನಗುಂದ ತಾಲೂಕಿನ ವಡಗೇರ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಎರಡು ಮತ ಪತ್ರ ಮಾಯವಾಗಿದ್ದು, ಅಧಿಕಾರಿಗಳ ತಲೆ ಬಿಸಿಗೆ ಕಾರಣವಾಗಿದೆ.

ಸಾಮಾನ್ಯ ಮಹಿಳೆಯ ಒಂದು ಸ್ಥಾನಕ್ಕಾಗಿ ನಡೆದ ಚುನಾವಣೆಯಲ್ಲಿ ಎರಡು ಮತ ಪತ್ರಗಳು ಕಡಿಮೆ ಆಗಿರುವುದು ಬೆಳಕಿಗೆ ಬಂದಿದೆ. ಮತ ಚಲಾವಣೆ ಸಮಯದಲ್ಲಿ ಒಟ್ಟು 599 ಮತಗಳನ್ನು ನೀಡಲಾಗಿದೆ. ಮತ ಎಣಿಕೆ ಸಮಯದಲ್ಲಿ 597 ಮತ ಪತ್ರ ಕಂಡು ಬಂದಿವೆ. ವಿಜಯಲಕ್ಷ್ಮೀ ಎಂಬುವವರು 298 ಮತಗಳನ್ನು ಪಡೆದು ಜಯ ಗಳಿಸಿದ್ದಾರೆ. ಅವರ ಪ್ರತಿಸ್ಪರ್ಧಿ ರತ್ನವ್ವ ಚಿತ್ತವಾಡಗಿ 273 ಮತಗಳನ್ನು ಪಡೆದುಕೊಂಡಿದ್ದಾರೆ. 25 ಮತಗಳ ಅಂತರದಿಂದ ವಿಜಯಲಕ್ಷ್ಮಿ ಜಯ ಗಳಿಸಿದ್ದಾರೆ.

ಮತದಾನ ನಡೆದಾಗ ಮತ್ತು ಮತ ಎಣಿಕೆಯಿಂದ ಎರಡು ಮತಗಳು ಕಡಿಮೆ ಆಗಿವೆ ಎಂದು ಸ್ಥಳೀಯ ಚುನಾವಣೆ ಅಧಿಕಾರಿ ಬಾಳಪ್ಪ ತಿಳಿಸಿದ್ದಾರೆ. ಗ್ರಾಮೀಣ ಭಾಗದಲ್ಲಿ ಮತ ಚಲಾವಣೆ ಸಮಯದಲ್ಲಿ ಮತ ಕೇಂದ್ರಕ್ಕೆ ಬಂದು ಮತ ಪತ್ರ ತೆಗೆದುಕೊಂಡು ಮರಳಿ ಮತ ಚಲಾಯಿಸಲು ಬರದೆ ಹೋಗಿರುವ ಸಾಧ್ಯತೆ ಇದೆ. ಮದ್ಯ ಸೇವನೆ ಮಾಡಿಕೊಂಡು ಮತ ಪೆಟ್ಟಿಗೆಯಲ್ಲಿ ಹಾಕದೇ ಹಾಗೇ ತೆಗೆದುಕೊಂಡು ಹೋಗಿರಬಹುದು ಎಂದು ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details