ಕರ್ನಾಟಕ

karnataka

ETV Bharat / briefs

ನಕಲಿ ಕಾರ್ಡ್ ಬಳಸಿ  ಹಣ ಕದಿಯುತ್ತಿದ್ದ ಖತರ್ನಾಕ್ ಕಳ್ಳರ ಬಂಧನ - ಸಿಇಎನ್ ಅಪರಾಧ ಠಾಣೆ ಪೊಲೀಸ್

ಎಟಿಎಂ ಕಾರ್ಡ್ ಬಳಸಲು ಬಾರದವರನ್ನು ಟಾರ್ಗೆಟ್‌ ಮಾಡಿ ಹಣ ಬಿಡಿಸಿ ಕೊಡುವುದಾಗಿ ನಂಬಿಸಿ, ಕಾರ್ಡ್ ಕುರಿತು ಮಾಹಿತಿ ಕಲೆಹಾಕುತ್ತಿದ್ದ ಮತ್ತು ನಂತರ ನಕಲಿ ಎಟಿಎಂ ಕಾರ್ಡ್ ಬಳಸಿ ಹಣ ಕದಿಯುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

Davanagere
Davanagere

By

Published : Jul 10, 2020, 2:52 PM IST

ದಾವಣಗೆರೆ: ನಕಲಿ ಎಟಿಎಂ ಕಾರ್ಡ್ ಬಳಸಿ ಹಣ ಕದಿಯುತ್ತಿದ್ದ ಇಬ್ಬರು ಆರೋಪಿಗಳನ್ನು ಸಿಇಎನ್ ಅಪರಾಧ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಉತ್ತರ ಪ್ರದೇಶದ ಸರೋಜ್, ಹರಿಲಾಲ್ ಬಂಧಿತ ಆರೋಪಿಗಳು. ಹರಿಹರ, ದಾವಣಗೆರೆ, ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ಸೇರಿದಂತೆ
ವಿವಿಧೆಡೆ ಕಳ್ಳತನ ಮಾಡುತ್ತಿದ್ದರು ಎಂದು ತನಿಖೆ ವೇಳೆ ಬೆಳಕಿಗೆ ಬಂದಿದೆ.

ಎಟಿಎಂ ಕಾರ್ಡ್ ಬಳಸಲು ಬಾರದವರನ್ನು ಟಾರ್ಗೆಟ್‌ ಮಾಡುತ್ತಿದ್ದ ಈ ಇಬ್ಬರು ಅಸಾಮಿಗಳು, ಹಣ ಬಿಡಿಸಿ ಕೊಡುವುದಾಗಿ ನಂಬಿಸಿ, ಎಟಿಎಂ ಕಾರ್ಡ್ ಪಡೆಯುತ್ತಿದ್ದರು. ತಮ್ಮಲ್ಲಿದ್ದ ಸ್ವೈಪ್ ಯಂತ್ರದ ಮೂಲಕ ಕಾರ್ಡ್​​​​​ನ ಸಂಪೂರ್ಣ ವಿವರ ಪಡೆಯುತ್ತಿದ್ದರು. ಎಟಿಎಂ ಕಾರ್ಡ್​​​ದಾರರಿಂದ ಪಿನ್ ನಂಬರ್ ಪಡೆದು ಬಳಿಕ ನಕಲಿ ಕಾರ್ಡ್ ಬಳಸಿಕೊಂಡು ಹಣ ತೆಗೆದುಕೊಳ್ಳುತ್ತಿದ್ದರು.

ಈ ಕುರಿತು ಹರಪನಹಳ್ಳಿಯ ಬಂಡಿ ರಾಜಪ್ಪ ಎಂಬುವರು ಸಿಇಎನ್ ಅಪರಾಧ ಠಾಣೆಗೆ ದೂರು ನೀಡಿದ್ದರು. ದೂರು ದಾಖಲಿಸಿಕೊಂಡ ಪೊಲೀಸರು ಸುತ್ತ ಮುತ್ತಲಿನ ಸಿಸಿ ಕ್ಯಾಮೆರಾ ಸೇರಿದಂತೆ ಇತರ ಸಾಕ್ಷ್ಯಗಳನ್ನು ಸಂಗ್ರಹಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ABOUT THE AUTHOR

...view details