ಕರ್ನಾಟಕ

karnataka

ETV Bharat / briefs

ರೌಡಿಸಂನಲ್ಲಿ ಗುರುತಿಸಿಕೊಂಡು ಅಕ್ರಮ ಹಣ ಗಳಿಕೆಗೆ ಮುಂದಾಗಿದ್ದ ಖದೀಮರು ಅಂದರ್​!

ರೌಡಿಸಂನಲ್ಲಿ ಗುರುತಿಸಿಕೊಂಡು ಈ ಮೂಲಕ ಹಣ ಸಂಪಾದನೆ ಮಾಡುವ ಗುರಿಹೊಂದಿದ್ದ ಆರೋಪಿಗಳನ್ನು ಬೆಂಗಳೂರಿನ ಮಾರತಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಅಕ್ರಮ ಹಣ ಗಳಿಕೆಗೆ ಮುಂದಾಗಿದ್ದ ಖದೀಮರು ಅಂದರ್
ಅಕ್ರಮ ಹಣ ಗಳಿಕೆಗೆ ಮುಂದಾಗಿದ್ದ ಖದೀಮರು ಅಂದರ್

By

Published : Jun 8, 2021, 4:10 PM IST

ಬೆಂಗಳೂರು:ಅಕ್ರಮವಾಗಿ ಹಣ ಸಂಪಾದನೆ ಮಾಡಿ ಐಷಾರಾಮಿ ಜೀವನ ನಡೆಸಲು ದರೋಡೆ‌ಗೆ ಮುಂದಾಗಿದ್ದ ಇಬ್ಬರು ಖದೀಮರನ್ನು ಮಾರತಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಬೆಳ್ಳಂದೂರಿನ ಬೋಗನಹಳ್ಳಿ ನಿವಾಸಿಗಳಾದ ಕೀರ್ತಿ ಹಾಗೂ ಮಂಜುನಾಥ್ ಬಂಧಿತ ಆರೋಪಿಗಳು‌. ಇನ್ನು ಪ್ರಕರಣದಲ್ಲಿ ಭಾಗಿಯಾಗಿರುವ ನಾಲ್ವರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಇಬ್ಬರು ಆರೋಪಿಗಳು ಬೆಳ್ಳಂದೂರು ಹಾಗೂ ವರ್ತೂರು ಪೊಲೀಸ್ ಠಾಣೆಯ ರೌಡಿಶೀಟರ್​ಗಳು ಎಂದು ತಿಳಿದುಬಂದಿದೆ.

ರೌಡಿಸಂನಲ್ಲಿ ಗುರುತಿಸಿಕೊಂಡು ಈ ಮೂಲಕ ಹಣ ಸಂಪಾದನೆ ಮಾಡುವ ಗುರಿಹೊಂದಿದ್ದ ಆರೋಪಿಗಳು ಜೂ.4ರಂದು ಬೆಳ್ಳಂದೂರು ರೈಲ್ವೆ ನಿಲ್ದಾಣ ಬಳಿಯ ನಿರ್ಜನ ಪ್ರದೇಶದಲ್ಲಿ ಮಾರಕಾಸ್ತ್ರ ಹಿಡಿದು ದರೋಡೆ ಮಾಡಲು ಸಂಚು ರೂಪಿಸಿದ್ದರು. ಈ ಮಾಹಿತಿ ಅರಿತ ಮಾರತಹಳ್ಳಿ ಪೊಲೀಸರು ಕಾರ್ಯಾಚರಣೆ ನಡೆಸಿ ಇಬ್ಬರನ್ನು ಬಂಧಿಸಿದರೆ ಉಳಿದವರು ತಲೆಮರೆಸಿಕೊಂಡಿದ್ದಾರೆ.

ಕೀರ್ತಿ ಹಾಗೂ ಮಂಜುನಾಥ್​ನನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ರೌಡಿಸಂ ಫೀಲ್ಡ್​ನಲ್ಲಿ ಹೆಸರು ಮಾಡಿ ಹಣ ಸಂಪಾದನೆ ಮಾಡಬೇಕೆಂದು ಎಂದುಕೊಂಡಿದ್ದೆವು ಎಂದು ಬಾಯ್ಬಿಟ್ಟಿದ್ದಾರೆ. ಆರೋಪಿಗಳಿಂದ 9 ಲಾಂಗ್, ಎರಡು ಬೈಕ್‌ ಹಾಗೂ ಒಂದು ಡ್ರ್ಯಾಗರ್ ಜಪ್ತಿ ಮಾಡಿಕೊಂಡಿದ್ದಾರೆ. ತಲೆಮರೆಸಿಕೊಂಡಿರುವ ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ABOUT THE AUTHOR

...view details