ಕರ್ನಾಟಕ

karnataka

ETV Bharat / briefs

ಕೋವಿಡ್ ಪರೀಕ್ಷೆಗಳಿಗೆ ಹೊಸ ದರ ಮರುನಿಗದಿ; ಕಡ್ಡಾಯ ಪಾಲನೆಗೆ ತುಮಕೂರು ಡಿಸಿ ಸೂಚನೆ - ಹೊಸ ದರ ಮರುನಿಗದಿ ಕಡ್ಡಾಯ ಪಾಲನೆಗೆ ತುಮಕೂರು ಡಿಸಿ ಸೂಚನೆ

ಕೋವಿಡ್-19 ಪತ್ತೆ ಹಚ್ಚಲು ನಡೆಸುವ ಆರ್​ಟಿ-ಪಿಸಿಆರ್, ಟ್ರೂ-ನ್ಯಾಟ್, ಸಿಬಿ ನ್ಯಾಟ್ ಇತರೆ ಪರೀಕ್ಷೆಗಳ ದರವನ್ನು ಸರ್ಕಾರ ಮರು ನಿಗದಿಪಡಿಸಿದ್ದು, ಇದನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಸೂಚಿಸಿದ್ದಾರೆ.

YS Patil
YS Patil

By

Published : May 16, 2021, 10:20 PM IST

ತುಮಕೂರು:ಕೋವಿಡ್-19 ಪತ್ತೆಗೆ ನಡೆಸುವ ಆರ್​ಟಿ-ಪಿಸಿಆರ್, ಟ್ರೂ-ನ್ಯಾಟ್, ಸಿಬಿ ನ್ಯಾಟ್, ರ್ಯಾಪಿಡ್ (rapid) ಆ್ಯಂಟಿಜನ್ ಹಾಗೂ ರ್ಯಾಪಿಡ್ ಆ್ಯಂಟಿಬಾಡಿ ಪರೀಕ್ಷೆಗಳ ದರವನ್ನು ಸರ್ಕಾರ ಮರು ನಿಗದಿಪಡಿಸಿದ್ದು, ಇದನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಸೂಚಿಸಿದ್ದಾರೆ.

ಸರ್ಕಾರಿ ಆಸ್ಪತ್ರೆಗಳಿಂದ ಖಾಸಗಿ ಪ್ರಯೋಗಶಾಲೆಗಳಿಗೆ ಮಾದರಿಗಳನ್ನು ಕಳುಹಿಸುವ ಆರ್​ಟಿ-ಪಿಸಿಆರ್ ಪರೀಕ್ಷೆಗೆ 500ರೂ., ಖಾಸಗಿ ಆಸ್ಪತ್ರೆಗಳಿಂದ ಸ್ವೀಕೃತವಾದ ಮಾದರಿಗಳನ್ನು ಖಾಸಗಿ ಪ್ರಯೋಗಶಾಲೆಗಳಲ್ಲಿ ಪರೀಕ್ಷಿಸುವ ಆ‍ರ್​ಟಿ–ಪಿಸಿಆರ್ ಪರೀಕ್ಷೆಗೆ 800ರೂ., ಖಾಸಗಿ ಆಸ್ಪತ್ರೆಗಳಿಂದ ಸ್ವೀಕೃತವಾದ ಮಾದರಿಗಳನ್ನು ಖಾಸಗಿ ಪ್ರಯೋಗಶಾಲೆಗಳಲ್ಲಿ ಪರೀಕ್ಷಿಸಿಸುವ ಟ್ರೂ ನ್ಯಾಟ್ ಪರೀಕ್ಷೆಗೆ 1250ರೂ., ಖಾಸಗಿ ಆಸ್ಪತ್ರೆಗಳಿಂದ ಸ್ವೀಕೃತವಾದ ಮಾದರಿಗಳನ್ನು ಖಾಸಗಿ ಪ್ರಯೋಗಶಾಲೆಗಳಲ್ಲಿ ಪರೀಕ್ಷಿಸುವ ಸಿಬಿ ನ್ಯಾಟ್ ಪರೀಕ್ಷೆಗೆ 2400ರೂ., ಖಾಸಗಿ ಪ್ರಯೋಗಶಾಲೆ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ನಡೆಸುವ ರ್ಯಾಪಿಡ್ ಆ್ಯಂಟಿಜೆನ್ ಪರೀಕ್ಷೆಗೆ 400ರೂ., ಖಾಸಗಿ ಪ್ರಯೋಗಶಾಲೆ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ನಡೆಸುವ ರ್ಯಾಪಿಡ್ ಆ್ಯಂಟಿಬಾಡಿ ಪರೀಕ್ಷೆಗೆ (IgG ELISA) 500ರೂ. ದರ ನಿಗದಿಪಡಿಸಲಾಗಿದೆ ಎಂದು ಡಿಸಿ ಮಾಹಿತಿ ನೀಡಿದ್ದಾರೆ.

ಈ ಎಲ್ಲಾ ಪರೀಕ್ಷೆಗಳ ಮಾದರಿಯನ್ನು ಮನೆಯಿಂದ ಸಂಗ್ರಹಿಸಬೇಕಾದಲ್ಲಿ ಒಂದು ಮನೆಯ ಸಂಗ್ರಹ ದರ‌ 400 ರೂ.ಗಳನ್ನು ಮೀರಬಾರದು. ಆರ್​ಟಿ-ಪಿಸಿಆರ್, ಟ್ರೂ ನ್ಯಾಟ್, ಸಿಟಿನ್ಯಾಟ್, ರ್ಯಾಪಿಡ್ ಆ್ಯಂಟಿಜೆನ್ ಹಾಗೂ ರ್ಯಾಪಿಡ್ ಆ್ಯಂಟಿಬಾಡಿ ಪರೀಕ್ಷೆಗಳನ್ನು ಐಸಿಎಂಆ‌ರ್ ಪ್ರಮಾಣಿತ ಪ್ರಯೋಗಶಾಲೆಗಳಲ್ಲಿಯೇ ನಡೆಸಬೇಕು ಎಂದು ಅವರು ತಿಳಿಸಿದ್ದಾರೆ.

ABOUT THE AUTHOR

...view details