ಜಿಲ್ಲೆಯ ತಡ ತಾಲೂಕಿನ ಸಮೀಪದಲ್ಲಿರುವ ಶ್ರೀಸಿಟಿಯಿಂದ ಸೆಲ್ಫೋನ್ ತುಂಬಿಕೊಂಡು ಕೊಲ್ಕತ್ತಾಗೆ ತೆರಳುತ್ತಿದ್ದ ಲಾರಿಯನ್ನು ದರೋಡೆಕೋರರು ಮಾರ್ಗಮಧ್ಯ ಅಂದರೆ, ದಗದರ್ತಿ ಗ್ರಾಮದ ನ್ಯಾಷನಲ್ ಹೈವೇಯಲ್ಲಿ ಅಡ್ಡಗಟ್ಟಿದ್ದಾರೆ. ಬಳಿಕ ಲಾರಿಯ ಚಾಲಕನನ್ನು ಮರಕ್ಕೆ ಕಟ್ಟಿ ಸೆಲ್ಫೋನ್ ತುಂಬಿದ ಲಾರಿಯನ್ನು ಮತ್ತೊಂದು ಸ್ಥಳಕ್ಕೆ ತೆಗೆದುಕೊಂಡು ಹೋಗಿದ್ದಾರೆ.
ಸೆಲ್ಫೋನ್ ಲಾರಿ ದೋಚಿ ದರೋಡೆಕೋರರು ಎಸ್ಕೇಪ್... ಹೀಗಿತ್ತು ಘಟನೆ! - ಹೀಗಿತ್ತು ಘಟನೆ
ನೆಲ್ಲೂರು: ಸೆಲ್ಫೋನ್ ತುಂಬಿದ ಲಾರಿಯನ್ನೇ ದರೋಡೆಕೋರರು ದೋಚಿರುವ ಘಟನೆ ಆಂಧ್ರಪ್ರದೇಶದ ನೆಲ್ಲೂರಿನಲ್ಲಿ ನಡೆದಿದೆ.
ಕೃಪೆ: eenadu.net
ಅಲ್ಲಿ ಕದ್ದ ಲಾರಿಯಲ್ಲಿದ್ದ ಸೆಲ್ಫೋನ್ಗಳನ್ನು ಮತ್ತೊಂದು ಲಾರಿಗೆ ಶಿಫ್ಟ್ ಮಾಡಿದ್ದಾರೆ. ಮತ್ತೊಂದು ಲಾರಿಗೆ ಸೆಲ್ಫೋನ್ ತುಂಬಿದ ಬಳಿಕ ಖಾಲಿ ಲಾರಿಯನ್ನು ಕಾವಲಿ ತಾಲೂಕಿನ ಗೌರವರಂ ಗ್ರಾಮದ ನ್ಯಾಷನಲ್ ಹೈವೇ ಮೇಲೆ ಬಿಟ್ಟು ಎಸ್ಕೇಪ್ ಆಗಿದ್ದಾರೆ. ಇನ್ನು ಮರಕ್ಕೆ ಕಟ್ಟಿ ಹಾಕಿದ ಲಾರಿ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ಕೈಗೊಂಡಿದ್ದಾರೆ.
ಈ ಘಟನೆ ಕುರಿತು ದಗದರ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳ ಪತ್ತೆಗೆ ಜಾಲ ಬೀಸಿದ್ದಾರೆ.