ಬೆಂಗಳೂರು: ನಿನ್ನೆ 19 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದ ಸರ್ಕಾರ ಇಂದು ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ಐಎಎಸ್ ಅಧಿಕಾರಿಗಳ ವರ್ಗಾವಣೆ.. ಬಿಡಿಎ ಆಯುಕ್ತ ಸ್ಥಾನದಿಂದ ರಾಕೇಶ್ ಸಿಂಗ್ ಎತ್ತಂಗಡಿ - undefined
ಸರ್ಕಾರ ಇಂದು ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ರಾಕೇಶ್ ಸಿಂಗ್ ಅವರನ್ನು ಬಿಡಿಎ ಆಯುಕ್ತ ಸ್ಥಾನದಿಂದ ಎತ್ತಂಗಡಿ ಮಾಡಲಾಗಿದೆ. ಡಾ. ಎನ್ ಮಂಜುಳಾ ಅವರನ್ನು ಬಿಡಿಎ ನೂತನ ಆಯುಕ್ತರನ್ನಾಗಿ ವರ್ಗಾವಣೆ ಮಾಡಲಾಗಿದೆ.
ಸರ್ಕಾರ ಒಟ್ಟು 10 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ರಾಕೇಶ್ ಸಿಂಗ್ ಅವರನ್ನು ಬಿಡಿಎ ಆಯುಕ್ತ ಸ್ಥಾನದಿಂದ ಎತ್ತಂಗಡಿ ಮಾಡಲಾಗಿದೆ. ಡಾ.ಎನ್ ಮಂಜುಳಾ ಅವರನ್ನು ಬಿಡಿಎ ನೂತನ ಆಯುಕ್ತರನ್ನಾಗಿ ವರ್ಗಾವಣೆ ಮಾಡಲಾಗಿದೆ. ಬಿಡಿಎ ಅಧ್ಯಕ್ಷ ಹಾಗೂ ಶಾಸಕ ಎಸ್ ಟಿ ಸೋಮಶೇಖರ್ ಅವರು ರಾಕೇಶ್ ಸಿಂಗ್ ಎತ್ತಂಗಡಿಗೆ ತೀವ್ರ ಒತ್ತಡ ಹೇರುತ್ತಿದ್ದರು ಎನ್ನಲಾಗಿದೆ. ಬಿಡಿಎ ಆಯುಕ್ತರಾಗಿ ರಾಕೇಶ್ ಸಿಂಗ್ ಕಾರ್ಯವೈಖರಿ ಬಗ್ಗೆ ಶಾಸಕ ಎಸ್ ಟಿ ಸೋಮಶೇಖರ್ ಬಹಿರಂಗವಾಗಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದರು. ಇದೀಗ ಸರ್ಕಾರ ರಾಕೇಶ್ ಸಿಂಗ್‌ರನ್ನು ವರ್ಗಾವಣೆ ಮಾಡಿದ್ದು ಹಲವು ಪ್ರಶ್ನೆಗಳಿಗೆ ಕಾರಣವಾಗಿದೆ.
ಯಾರು ಎಲ್ಲಿಗೆ ವರ್ಗಾವಣೆ?
- ಪಿ.ರವಿ ಕುಮಾರ್- ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ
- ಮಹೇಂದ್ರ ಜೈನ್- ಇಂಧನ ಇಲಾಖೆ, ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ
- ಬಿ.ಎಚ್.ಅನಿಲ್ ಕುಮಾರ್- ನಗರಾಭಿವೃದ್ಧಿ ಇಲಾಖೆ, ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ
- ಪ್ರಿಯಾಂಕಾ ಮೇರಿ ಫ್ರಾನ್ಸಿಸ್- ಐಟಿ ಮತ್ತು ಬಿಟಿ ಇಲಾಖೆ ನಿರ್ದೇಶಕಿ
- ಎಸ್.ಎಸ್.ನಕುಲ್- ಬಳ್ಳಾರಿ ಡಿಸಿ
- ರಾಮ್ ಪ್ರಸಾತ್ ಮನೋಹರ್- ಉದ್ಯೋಗ ಮತ್ತು ತರಬೇತಿ ಇಲಾಖೆ ಆಯುಕ್ತರು
- ಜಿ.ಸಿ.ವೃಷಬೇಂದರ್ ಮೂರ್ತಿ- ರೇಷ್ಮೆ ಅಭಿವೃದ್ಧಿ ಹಾಗೂ ನಿರ್ದೇಶನಾಲಯದ ಆಯುಕ್ತರು
- ಯಾಲಕ್ಕಿಗೌಡ- ಮಂಡ್ಯ ಸಿಇಒ