ಇನ್ನು ದರ್ಶನ್ ಫೆಬ್ರವರಿ 16 ರಂದು ಕೇಕ್ ಕಟ್ ಮಾಡದೆ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ವಿಜೃಂಭಣೆಯ ಬರ್ತಡೇ ಅಲ್ಲದಿದ್ದರೂ ದಾಸನ ಅಭಿಮಾನಿಗಳು ಮಾತ್ರ ಅವರಿಗೆ ಉಡುಗೊರೆಯ ಸುರಿಮಳೆಯನ್ನೇ ಹರಿಸಿದ್ದರು. ಅಭಿಮಾನಿಯೊಬ್ಬ ಬೆನ್ನಿನ ಮೇಲೆ ದೊಡ್ಡದಾಗಿ ದರ್ಶನ್ ಟ್ಯಾಟೂ ಹಾಕಿಸಿಕೊಂಡಿದ್ದರು. ಇದೀಗ ಮತ್ತೊಬ್ಬ ಅಭಿಮಾನಿ ಒಂದೇ ಫ್ರೇಮ್ನಲ್ಲಿ ತೂಗುದೀಪ್ ಶ್ರೀನಿವಾಸ್, ದರ್ಶನ್ ಹಾಗೂ ಅವರ ಪುತ್ರ ವಿನೀಶ್ ಇರುವ ಚಿತ್ರವನ್ನು ಪೆನ್ಸಿಲ್ನಿಂದ ಬಿಡಿಸಿದ್ದಾರೆ.
ಒಂದೇ ಫ್ರೇಮ್ನಲ್ಲಿ ತೂಗುದೀಪ್ ಫ್ಯಾಮಿಲಿ..! - undefined
ಚಾಲೆಂಜಿಂಗ್ ಸ್ಟಾರ್ ದರ್ಶನ್ ಸ್ಯಾಂಡಲ್ವುಡ್ನಲ್ಲೇ ಅತಿ ಹೆಚ್ಚು ಫ್ಯಾನ್ ಫಾಲೋಯಿಂಗ್ ಹೊಂದಿರುವ ನಟ. ಸದ್ಯಕ್ಕೆ ದರ್ಶನ್ 'ಯಜಮಾನ' ಸಿನಿಮಾ ಬಿಡುಗಡೆಯ ನಿರೀಕ್ಷೆಯಲ್ಲಿದ್ದಾರೆ.
![ಒಂದೇ ಫ್ರೇಮ್ನಲ್ಲಿ ತೂಗುದೀಪ್ ಫ್ಯಾಮಿಲಿ..!](https://etvbharatimages.akamaized.net/etvbharat/images/768-512-2555264-143-40286ab5-f4f1-4707-8893-cbbe84a5507f.jpg)
ಕೃಪೆ: Twitter
ಈ ಪೋಟೋ ವಿಶೇಷ ಎಂದರೆ ತೂಗುದೀಪ್ ಶ್ರೀನಿವಾಸ್ ದೊಡ್ಡ ಕುರ್ಚಿಯಲ್ಲಿ ಕುಳಿತು ಬಲಭಾಗ ನಿಂತಿರುವ ಮೊಮ್ಮಗ ವಿನೀಶ್ ಹೆಗಲ ಮೇಲೆ ಕೈ ಹಾಕಿದ್ದಾರೆ. ಎಡಭಾಗದಲ್ಲಿ ದರ್ಶನ್ ವಿರಾಜಮಾನರಾಗಿ ನಿಂತಿದ್ದಾರೆ. ಸದ್ಯಕ್ಕೆ ಈ ಸ್ಕೆಚ್ ದರ್ಶನ್ ಅಭಿಮಾನಿಗಳ ಫೇಸ್ಬುಕ್ ಹಾಗೂ ವಾಟ್ಸಾಪ್ ಸ್ಟೇಟಸ್ನಲ್ಲಿ ವಿಜೃಂಭಿಸುತ್ತಿದೆ.