ಕರ್ನಾಟಕ

karnataka

ETV Bharat / briefs

75 ಪೈಸೆಗೂ ಮಾರಾಟವಾಗದ ಕೆಜಿ ಟೊಮ್ಯಾಟೊ.. ಬೀದಿಪಾಲಾಗಿದೆ ರೈತನ ಬದುಕು - ಕೋಲಾರ ಸುದ್ದಿ

ಕೋಲಾರದ ಮುಳಬಾಗಿಲು ತಾಲೂಕಿನ ವಡ್ಡಹಳ್ಳಿ ಬಳಿ ಇರುವ ಮಾರುಕಟ್ಟೆಗೆ ಇಂದು ಒಟ್ಟು 30 ಸಾವಿರ ಟೊಮ್ಯಾಟೊ ಬಾಕ್ಸ್‌ಗಳು ಬಂದಿತ್ತು. ಇದರಲ್ಲಿ 5 ಸಾವಿರ ಬಾಕ್ಸ್‌ಗಳಿಗೆ 30 ರೂಪಾಯಿಯಂತೆ ವ್ಯಾಪಾರವಾಗಿದೆ..

Tomato
Tomato

By

Published : May 15, 2021, 7:29 PM IST

ಕೋಲಾರ :1 ಕೆಜಿ ಟೊಮ್ಯಾಟೊ ಕೇವಲ 75 ಪೈಸೆಗೂ ಮಾರಾಟವಾಗದ ಹಿನ್ನೆಲೆ ಮನನೊಂದ ಕೋಲಾರದ ರೈತರು ರಸ್ತೆ ಬದಿಯಲ್ಲಿ ಸುರಿದು ಆಕ್ರೋಶ ಹೊರ ಹಾಕಿದ್ದಾರೆ.

ಕೊರೊನಾ ಲಾಕ್​ಡೌನ್ ಹೊಡೆತಕ್ಕೆ ಕೋಲಾರದಲ್ಲಿ ರೈತರು ತತ್ತರಿಸಿದ್ದಾರೆ. ತಾನು ಬೆಳೆದ ಬೆಳೆಗೆ ಬೆಲೆ ಇಲ್ಲದೆ ಮಾರುಕಟ್ಟೆ ಇಲ್ಲದೆ ರೈತನ ಜೀವನ ಬೀದಿಪಾಲಾಗಿದೆ.

15 ಕೆಜಿ ತೂಕದ ಟೊಮ್ಯಾಟೊ ಬಾಕ್ಸ್ ಕೇವಲ 2 ರೂಪಾಯಿಗೆ ಮಾರಾಟವಾಗುವ ಮೂಲಕ ನಷ್ಟದಲ್ಲಿ ರೈತನ ಬದುಕು ಮೂರಾಬಟ್ಟೆಯಾಗಿದೆ.

ಜಿಲ್ಲೆಯ ಮುಳಬಾಗಿಲು ತಾಲೂಕಿನ ವಡ್ಡಹಳ್ಳಿ ಬಳಿ ಇರುವ ಟೊಮ್ಯಾಟೊ ಮಾರುಕಟ್ಟೆಯಲ್ಲಿ ಬೆಲೆ ಇಲ್ಲದೆ ಮಾರಾಟವಾಗದ ಟೊಮ್ಯಾಟೊವನ್ನ ರಸ್ತೆ ಬದಿಯಲ್ಲಿ ಸುರಿಯುತ್ತಿದ್ದಾರೆ ರೈತರು.

ಸಾಲಸೋಲ ಮಾಡಿ ಎಕರೆಗೆ ಮೂರು ಲಕ್ಷ ಖರ್ಚು ಮಾಡಿ ಬೆಳೆದ ಬೆಳೆಯನ್ನ ರಸ್ತೆ ಬದಿ ಸುರಿದು ಆಕ್ರೋಶ ಹೊರ ಹಾಕಿರುವ ಟೊಮ್ಯಾಟೊ ಬೆಳೆಗಾರರು, ಸರ್ಕಾರಕ್ಕೆ ಹಿಡಿಶಾಪ ಹಾಕುವಂತಾಗಿದೆ.

ಮಾರುಕಟ್ಟೆಯ ವರ್ತಕರಿಗೆ ಟೊಮ್ಯಾಟೊ ಬಾಕ್ಸ್‌ಗಳು ಹಿಂತಿರುಗಿಸಬೇಕಾದ ಹಿನ್ನೆಲೆ ರಸ್ತೆ ಬದಿಯಲ್ಲಿ ಟೊಮ್ಯಾಟೋ ಸುರಿದು ವಾಪಸ್ಸಾಗುತ್ತಿದ್ದಾನೆ.

ಕೋಲಾರದ ಮುಳಬಾಗಿಲು ತಾಲೂಕಿನ ವಡ್ಡಹಳ್ಳಿ ಬಳಿ ಇರುವ ಮಾರುಕಟ್ಟೆಗೆ ಇಂದು ಒಟ್ಟು 30 ಸಾವಿರ ಟೊಮ್ಯಾಟೊ ಬಾಕ್ಸ್‌ಗಳು ಬಂದಿತ್ತು. ಇದರಲ್ಲಿ 5 ಸಾವಿರ ಬಾಕ್ಸ್‌ಗಳಿಗೆ 30 ರೂಪಾಯಿಯಂತೆ ವ್ಯಾಪಾರವಾಗಿದೆ.

ಆದ್ರೆ, ಇನ್ನುಳಿದ 25 ಸಾವಿರ ಟೊಮ್ಯಾಟೋ ಬಾಕ್ಸ್‌ಗಳನ್ನು ಕೇವಲ 2 ರೂಪಾಯಿಗೆ ಇಲ್ಲಿನ ವ್ಯಾಪಾರಿಗಳು ಕೇಳಿದ ಹಿನ್ನೆಲೆ ಮನನೊಂದು ರೈತ ರಸ್ತೆ ಬದಿಯಲ್ಲಿ ಸುರಿದು ಬೇಸರ ವ್ಯಕ್ತಪಡಿಸಿದ್ದಾನೆ.

ABOUT THE AUTHOR

...view details