ಹೈದರಾಬಾದ್:ಎರಡು ವರ್ಷದ ಹಿಂದೆ ದಕ್ಷಿಣ ಭಾರತದ ಸಿನಿರಂಗದಲ್ಲಿ ಸಂಚಲನ ಮೂಡಿಸಿದ್ದ ಡ್ರಗ್ ಕೇಸ್ನಲ್ಲಿ ಎಲ್ಲ ತೆಲುಗು ಕಲಾವಿದರಿಗೆ ಕ್ಲೀನ್ಚಿಟ್ ದೊರೆತಿದೆ.
2017ರಲ್ಲಿ ಡ್ರಗ್ ಕೇಸ್ ವಿಚಾರದಲ್ಲಿ ನೇರ ಹಾಗೂ ಪರೋಕ್ಷವಾಗಿ ಸೇರಿದ ಸುಮಾರು 64 ಮಂದಿ ತೆಲುಗು ಚಿತ್ರರಂಗ ಕಲಾವಿದರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿತ್ತು.
ಪ್ರಕರಣದಲ್ಲಿ ಖ್ಯಾತ ಕಲಾವಿದರಾದ ರವಿತೇಜಾ, ಮುಮೈತ್ ಖಾನ್, ಚಾರ್ಮಿ ಕೌರ್, ನವದೀಪ್ ಹಾಗೂ ನಿರ್ದೇಶಕ ಪೂರಿ ಜಗನ್ನಾಥ್ರನ್ನು ವಿಚಾರಣೆ ನಡೆಸಲಾಗಿತ್ತು. ಇದಕ್ಕಾಗಿ ವಿಶೇಷ ತನಿಖಾ ದಳವನ್ನು ಸಹ ರಚನೆ ಮಾಡಿ ಸುಮಾರು ಎರಡು ವರ್ಷಗಳ ಕಾಲ ವಿಚಾರಣೆ ನಡೆಸಲಾಗಿತ್ತು.
ಬರೋಬ್ಬರಿ ಎರಡು ವರ್ಷಗಳ ಕಾಲ ನಡೆದ ವಿಚಾರಣೆಯಲ್ಲಿ ತೆಲುಗು ಸಿನಿ ಕಲಾವಿದರು ಕೇಸ್ನಲ್ಲಿ ಯಾವುದೇ ರೀತಿಯಲ್ಲೂ ಸಂಬಂಧ ಹೊಂದಿಲ್ಲ ಎನ್ನುವುದು ತಿಳಿದು ಬಂದಿದೆ. ಆರೋಪ ಕೇಳಿ ಬಂದ ಎಲ್ಲ 64 ನಟ-ನಟಿಯರು ಹಾಗೂ ನಿರ್ದೇಶಕರನ್ನ SIT ದೋಷಮುಕ್ತರನ್ನಾಗಿ ಮಾಡಿದೆ. ಈ ಮೂಲಕ ಟಾಲಿವುಡ್ ಕಲಾವಿದರಿಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ.