ಕರ್ನಾಟಕ

karnataka

ETV Bharat / briefs

ಮೊಹಮ್ಮದ್ ಶಹಾಬುದ್ದೀನ್ ಸಾವಿನ ಸುದ್ದಿ ಅಲ್ಲಗಳೆದ ತಿಹಾರ್​ ಜೈಲು - ಆರ್‌ಜೆಡಿ ಮಾಜಿ ಸಂಸದ ಮೊಹಮ್ಮದ್ ಶಹಾಬುದ್ದೀನ್

ತಿಹಾರ್ ಜೈಲಿನಲ್ಲಿ ಕೋವಿಡ್ ಸೋಂಕಿನ ಹರಡುವಿಕೆ ನಿರಂತರವಾಗಿ ಹೆಚ್ಚುತ್ತಿದೆ, ಕೈದಿಗಳು ಸೋಂಕಿಗೆ ಒಳಗಾಗುವುದಲ್ಲದೇ, ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.

mohammad Shahabuddin
mohammad Shahabuddin

By

Published : May 1, 2021, 5:01 PM IST

ನವದೆಹಲಿ:ಆರ್‌ಜೆಡಿ ಮಾಜಿ ಸಂಸದ ಮೊಹಮ್ಮದ್ ಶಹಾಬುದ್ದೀನ್ ಸಾವಿನ ಬಗ್ಗೆ ವದಂತಿಗಳನ್ನು ತಿಹಾರ್ ಜೈಲಿನ ಅಧಿಕಾರಿಗಳು ನಿರಾಕರಿಸಿದ್ದಾರೆ. ಸದ್ಯಕ್ಕೆ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ.

ತಿಹಾರ್ ಜೈಲಿನಲ್ಲಿರುವ ನಾಯಕ ಶಹಾಬುದ್ದೀನ್ ಅವರು ಕಳೆದ ವಾರ ಕೋವಿಡ್​ಗೆ ತುತ್ತಾಗಿದ್ದರು. ಬಳಿಕ ಚಿಕಿತ್ಸೆಗಾಗಿ ಅವರನ್ನು ದೀನ್​ದಯಾಲ್ ಉಪಾಧ್ಯಾಯ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ತಿಹಾರ್ ಜೈಲಿನ ಡಿಜಿ ಸಂದೀಪ್ ಗೋಯಲ್ ಅವರು ಹೇಳುವಂತೆ ಶಹಾಬುದ್ದೀನ್ ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದ್ರೆ ಅವರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಿದ್ದಾರೆ.

ತಿಹಾರ್ ಜೈಲಿನಲ್ಲಿ ಕೋವಿಡ್ ಸೋಂಕಿನ ಹರಡುವಿಕೆ ನಿರಂತರವಾಗಿ ಹೆಚ್ಚುತ್ತಿದೆ, ಕೈದಿಗಳು ಸೋಂಕಿಗೆ ಒಳಗಾಗುವುದಲ್ಲದೇ, ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಜೈಲಿನ ಮೂಲಗಳ ಪ್ರಕಾರ, ಇದುವರೆಗೆ 200 ಕ್ಕೂ ಹೆಚ್ಚು ಕೈದಿಗಳು ಸೋಂಕಿಗೆ ಒಳಗಾಗಿದ್ದು, ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ತಿಹಾರ್‌ನಲ್ಲಿ ಈವರೆಗೆ ಆರು ಕೈದಿಗಳು ಕೋವಿಡ್ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಈ ಹಿಂದೆ ಮಾಜಿ ಆರ್‌ಜೆಡಿ ಸಂಸದ ಶಹಾಬುದ್ದೀನ್ ಕೋವಿಡ್ ಕಾರಣದಿಂದ ನಿಧನ ಹೊಂದಿದ್ದಾರೆ ಎಂದು ಟ್ವೀಟ್ ಮಾಡಲಾಗಿತ್ತು. ಆ ಬಳಿಕ ಟ್ವೀಟ್​ಅನ್ನು ಅಳಿಸಿ, ಸ್ಪಷ್ಟೀಕರಣವನ್ನು ಬಿಡುಗಡೆ ಮಾಡಲಾಗಿದೆ.

For All Latest Updates

ABOUT THE AUTHOR

...view details