ಕರ್ನಾಟಕ

karnataka

ETV Bharat / briefs

ಇಂದು ರಾಜಸ್ಥಾನ ರಾಯಲ್ಸ್​ಗೆ ಪಂಜಾಬ್​ ಸವಾಲ್​... ಎರಡು ತಂಡಕ್ಕೂ ಕನ್ನಡಿಗರೇ ಬಲ - ಕ್ರಿಕೆಟ್​

ಅಂಕಪಟ್ಟಿಯಲ್ಲಿ 5 ನೇ ಸ್ಥಾನದಲ್ಲಿರುವ ಪಂಜಾಬ್​ ಹಾಗೂ 7 ನೇ ಸ್ಥಾನದಲ್ಲಿರುವ ರಾಜಸ್ಥಾನ ತಂಡಗಳು 12ನೇ ಆವೃತ್ತಿಯಲ್ಲಿ ಎರಡನೇ ಬಾರಿಗೆ ಮುಖಾಮುಖಿಯಾಗುತ್ತಿವೆ.

rr

By

Published : Apr 16, 2019, 5:25 PM IST

ಮೊಹಾಲಿ: ಕನ್ನಡಿಗರ ಪ್ರದರ್ಶನವೇ ನಿರ್ಣಾಯಕವಾಗಿರುವ ಎರಡು ತಂಡಗಳಾದ ರಾಜಸ್ಥಾನ ಹಾಗೂ ಪಂಜಾಬ್​ ತಂಡಗಳು ಇಂದು ಮೊಹಾಲಿಯಲ್ಲಿ ಮುಖಾಮುಖಿಯಾಗಲಿವೆ.

ಅಂಕಪಟ್ಟಿಯಲ್ಲಿ 5 ನೇ ಸ್ಥಾನದಲ್ಲಿರುವ ಪಂಜಾಬ್​ ಹಾಗೂ 7 ನೇ ಸ್ಥಾನದಲ್ಲಿರುವ ರಾಜಸ್ಥಾನ ತಂಡಗಳು 12ನೇ ಆವೃತ್ತಿಯಲ್ಲಿ ಎರಡನೇ ಬಾರಿಗೆ ಮುಖಾಮುಖಿಯಾಗುತ್ತಿವೆ.

ಎರಡು ತಂಡಗಳಲ್ಲೂ ಕರ್ನಾಟಕದ ಪ್ಲೇಯರ್ಸ್​ಗಳೆ ಪ್ರಮುಖ ಆಕರ್ಷಣೆಯಾಗಿದ್ದಾರೆ. ಪಂಜಾಬ್​ ತಂಡಕ್ಕೆ ಕೆಎಲ್​ ರಾಹುಲ್​ ಹಾಗೂ ಮಯಾಂಕ್​ ಅಗರ್​ವಾಲ್​ ಬಲವಿದ್ದರೆ,ರಾಜಸ್ಥಾನ ತಂಡಕ್ಕೆ ಟೂರ್ನಿಯಲ್ಲಿ ಅತ್ಯುತ್ತಮ ಬೌಲಿಂಗ್​ ಪ್ರದರ್ಶನ ನೀಡುತ್ತಿರುವ ಶ್ರೇಯಸ್​ ಗೋಪಾಲ್​ ಹಾಗೂ ಕೆ.ಗೌತಮ್​ ಗೇಮ್​ ಚೇಂಜರ್​ ಆಗಿದ್ದಾರೆ.

ಆರ್ಚರ್ ​vs ಆ್ಯಂಡ್ರ್ಯೂ ಟೈ

ಆಡಿರುವ 8 ಪಂದ್ಯಗಳಲ್ಲಿ ತಲಾ 4 ಸೋಲು-ಗೆಲುವು ಕಂಡಿರುವ ಪಂಜಾಬ್​ ಕಳೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್​ ಹಾಗೂ ರಾಯಲ್​ ಚಾಲೆಂಜರ್ಸ್​ ವಿರುದ್ಧ ಸೋಲನುಭವಿಸಿದ್ದು,​ ಈ ಪಂದ್ಯದಲ್ಲಿ ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಎರಡೂ ಪಂದ್ಯಗಳಲ್ಲೂ ಗೆಲುವಿನ ಸನಿಹ ಬಂದು ಎಡವಿರುವ ಪಂಜಾಬ್​ ಈ ಪಂದ್ಯದಲ್ಲಿ ತನ್ನ ತಪ್ಪುಗಳನ್ನು ತಿದ್ದಿಕೊಂಡು ತವರಿನ ಬೆಂಬಲದೊಂದಿಗೆ ಗೆಲ್ಲುವ ಆಲೋಚನೆಯಲ್ಲಿದೆ.

ಇನ್ನು ರಾಜಸ್ಥಾನ ಆಡಿರುವ 7 ಪಂದ್ಯಗಳಲ್ಲಿ 5 ರಲ್ಲಿ ಸೋಲನುಭವಿಸಿದೆ. ಕಳೆದ ಪಂದ್ಯದಲ್ಲಿ ಮುಂಬೈಗೆ ಶಾಕ್​ ನೀಡಿ ಗೆಲುವಿನ ಹಳಿಗೆ ಮರಳಿದೆ. ಬಟ್ಲರ್​ ಫಾರ್ಮ್​ಗೆ ಬಂದಿರುವುದು ರಾಜಸ್ಥಾನಕ್ಕೆ ಆನೆ ಬಲ ಬಂದಂತಾಗಿದೆ. ಇನ್ನು ಬೌಲಿಂಗ್​ನಲ್ಲಿ ಆರ್ಚರ್​,ಗೋಪಾಲ್​ ಹಾಗೂ ಕುಲಕರ್ಣಿ ಉತ್ತಮ ಪ್ರದರ್ಶನ ನೀಡುತ್ತಿರುವುದರಿಂದ ಈ ಪಂದ್ಯದಲ್ಲಿ ಪಂಜಾಬ್​ಗೆ ಕಠಿಣ ಸವಾಲು ನೀಡಲು ಸಿದ್ದವಾಗಿದೆ.

ಆರ್ಚರ್ ​vs ಆ್ಯಂಡ್ರ್ಯೂ ಟೈ
ಬಟ್ಲರ್​ vs ಗೇಲ್​

ಮುಖಾಮುಖಿ

ಎರಡು ತಂಡಗಳು ಐಪಿಎಲ್​ನಲ್ಲಿ 18 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು ರಾಜಸ್ಥಾನ್​ ತಂಡ10ರಲ್ಲಿ ಪಂಜಾಬ್​ ತಂಡ 8ರಲ್ಲಿ ಜಯ ಸಾಧಿಸಿವೆ. ಮೊಹಾಳಿಯಲ್ಲಿ ಎರಡು ತಂಡಗಳು ತಲಾ ಮೂರು ಪಂದ್ಯಗಳಲ್ಲಿ ಜಯ ಕಂಡಿವೆ.

ಕಿಂಗ್ಸ್​ ಇಲೆವೆನ್​ ಪಂಜಾಬ್​

ಆರ್​. ಆಶ್ವಿನ್​(ನಾಯಕ),ಕ್ರಿಸ್​ ಗೇಲ್​, ಮಯಾಂಕ್​ ಅಗರ್​ವಾಲ್​ ,ಕೆ.ಎಲ್​ ರಾಹುಲ್​, ಮಂದೀಪ್​ ಸಿಂಗ್​,ಮುಜೀಬ್​ ಉರ್​ ರೆಹಮಾನ್/ ಸಾಮ್​ ಕರ್ರನ್​, ನಿಕೋಲಸ್​ ಪೂರನ್​, ಸರ್ಫರಾಜ್​ ಖಾನ್​,ಮೊಹಮ್ಮದ್​ ಶಮಿ, ಆ್ಯಂಡ್ರ್ಯೂ ಟೈ, ಅಂಕಿತ್​ ರಜಪೂತ್

ರಾಜಸ್ಥಾನ್​ ರಾಯಲ್ಸ್​:

ಅಜಿಂಕ್ಯ ರಹಾನೆ(ನಾಯಕ),ಸ್ಟಿವ್​ ಸ್ಮಿತ್​,ಜೋಫ್ರಾ ಆರ್ಚರ್​, ಜೋಸ್​ ಬಟ್ಲರ್​, ಲೈಮ್​ ಲಿವಿಂಗ್ಸ್ಟನ್​,ಸಂಜು ಸ್ಯಾಮ್ಸನ್​, ಶ್ರೇಯಸ್​ ಗೋಪಾಲ್​, ಜಯದೇವ್​ ಉನಾದ್ಕಟ್​, ದವಳ್​ ಕುಲಕರ್ಣಿ, ಕೃಷ್ಣಪ್ಪ ಗೌತಮ್​, ರಾಹುಲ್​ ತ್ರಿಪಾಠಿ

ABOUT THE AUTHOR

...view details