ಕರ್ನಾಟಕ

karnataka

ETV Bharat / briefs

ಆನ್​ಲೈನ್​ ಕ್ಲಾಸ್ ಕೇಳುತ್ತಿದ್ದಾಗ ಬಡಿದ ಸಿಡಿಲು: ಮೂವರಿಗೆ ಗಾಯ - ಸಿಡಿಲು ಬಡಿದು ಮೂವರು ಗಾಯ

ಸಿಡಿಲು ಬಡಿದು ಮೂವರು ಗಾಯಗೊಂಡಿರುವ ಘಟನೆ ಬಂಟ್ವಾಳ ತಾಲೂಕಿನ ವೀರಕಂಭ ಗ್ರಾಮದ ಕಲ್ಮಲೆ ಎಂಬಲ್ಲಿ ಬುಧವಾರ ಸಂಜೆ ನಡೆದಿದೆ.

 Three injured by thunderbolt shock
Three injured by thunderbolt shock

By

Published : Jul 8, 2021, 1:07 AM IST

ಬಂಟ್ವಾಳ: ಸಿಡಿಲು ಬಡಿದು ಆನ್​ಲೈನ್​ ಕ್ಲಾಸ್ ಆಲಿಸುತ್ತಿದ್ದ ವಿದ್ಯಾರ್ಥಿನಿ ಸೇರಿ ಮೂವರು ಗಾಯಗೊಂಡ ಘಟನೆ ಬಂಟ್ವಾಳ ತಾಲೂಕಿನ ವೀರಕಂಭ ಗ್ರಾಮದ ಕಲ್ಮಲೆ ಎಂಬಲ್ಲಿ ಬುಧವಾರ ಸಂಜೆ ನಡೆದಿದೆ.

ರಘುನಾಥ ಶೆಟ್ಟಿ ಅವರ ಪತ್ನಿ ಜಯಂತಿ (49), ಮಕ್ಕಳಾದ ರಕ್ಷಿತಾ (24) ಮತ್ತು ಪ್ರಜೀತಾ (19) ಗಾಯಗೊಂಡವರು. ಇವರನ್ನು ವಿಟ್ಲ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕಳುಹಿಸಲಾಗಿದೆ. ಘಟನೆಯಲ್ಲಿ ಮನೆ ಸಂಪೂರ್ಣ ಬಿರುಕುಬಿಟ್ಟಿದೆ. ಸಿಡಿಲು ಬಡಿಯುವ ವೇಳೆ ಪ್ರಜಿತ ಅವರಿಗೆ ಆನ್ ಲೈನ್ ಕ್ಲಾಸ್​ ನಡೆಯುತ್ತಿದ್ದು, ಅವರು ಮೊಬೈಲ್ ಇಯರ್ ಪೋನ್ ಬಳಸಿ ಮನೆಯ ಕೋಣೆಯಲ್ಲಿ ಪಾಠ ಕೇಳುತ್ತಿದ್ದರು.

ವೀರಕಂಭ ಗ್ರಾ.ಪಂ.ಅಧ್ಯಕ್ಷ ದಿನೇಶ್ , ಉಪಾಧ್ಯಕ್ಷೆ ಶೀಲಾನಿರ್ಮಲ ವೇಗಸ್, ಸದಸ್ಯರಾದ ಅಬ್ದುಲ್ ರಹಮಾನ್, ಜಯಪ್ರಸಾದ್, ಸಂದೀಪ್, ಗ್ರಾಮ ಕರಣೀಕ ಕರಿಬಸಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ABOUT THE AUTHOR

...view details