ಬಳ್ಳಾರಿ:ಜಿಲ್ಲೆಯಲ್ಲಿ ಇಂದು ಕೊರೊನಾ ಸೋಂಕಿನಿಂದ ಗುಣಮುಖರಾದ ಮೂವರಿಗೆ ಆಸ್ಪತ್ರೆ ಸಿಬ್ಬಂದಿ ಚಪ್ಪಾಳೆ ತಟ್ಟುವ ಮೂಲಕ ಬೀಳ್ಕೊಟ್ಟರು.
ಕೋವಿಡ್-19 ಜಿಲ್ಲಾಸ್ಪತ್ರೆಯಲ್ಲಿ ಈ ಮೂವರು ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಎನ್.ಬಸರೆಡ್ಡಿ ಹಾಗೂ ಸಿಬ್ಬಂದಿ ಚಪ್ಪಾಳೆ ತಟ್ಟುವ ಮೂಲಕ ಆತ್ಮೀಯವಾಗಿ ಬಿಡುಗಡೆಗೊಳಿಸಿದ್ರು.
ಬಿಡುಗಡೆಗೊಂಡವರ ವಿವರ:
34 ವರ್ಷದ ಪುರುಷ (ಪಿ-2308)-ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಸ್ಟಾಪ್ ನರ್ಸ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.
44 ವರ್ಷದ (ಪಿ-2781) ಮಥುರಾದಿಂದ ಬಳ್ಳಾರಿಗೆ ಪ್ರಯಾಣಿಸಿದ ಟ್ರಾವೆಲ್ ಹಿಸ್ಟರಿ ಇದೆ.
26 ವರ್ಷದ ಯುವತಿ (ಪಿ-2778) ಕುರಿಹಟ್ಟಿ ಮೂಲದವಳೆಂದು ತಿಳಿದು ಬಂದಿದೆ.
ನಿನ್ನೆ ತಡರಾತ್ರಿ ಮತ್ತೊಂದು ಕೊರೊನಾ ಪಾಸಿಟಿವ್ ಪ್ರಕರಣ ದಾಖಲಾಗಿದ್ದು, ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 53ಕ್ಕೆ ಏರಿಕೆಯಾಗಿದೆ. ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, ಜಿಲ್ಲೆಯಲ್ಲಿ ಒಟ್ಟು 17 ಸಕ್ರಿಯ ಪ್ರಕರಣಗಳಿವೆ.