ಮೈಸೂರು: ಶಾಲೆ ಮುಗಿಸಿ ಮನೆಗೆ ಬಾರದೆ ಆಟ ಆಡಲು ಹೋಗಿದ್ದ ಮೂವರು ಮಕ್ಕಳು ನಾಪತ್ತೆಯಾಗಿರುವ ಘಟನೆ ಪಿರಿಯಾಪಟ್ಟಣ ತಾಲೂಕಿನ ಕೆ.ಸಿ. ಕೊಪ್ಪಲು ಗ್ರಾಮದಲ್ಲಿ ನಡೆದಿದೆ.
ಒಂದೇ ಗ್ರಾಮದ ಮೂವರು ಮಕ್ಕಳು ದಿಢೀರ್ ನಾಪತ್ತೆ: ಪೋಷಕರು ಕಂಗಾಲು - undefined
ಶಾಲೆ ಮುಗಿಸಿ ಮನೆಗೆ ಬರದೇ ಆಟವಾಡಲು ಹೋದ ಒಂದೇ ಹಳ್ಳಿಯ ಮೂವರು ಮಕ್ಕಳು ನಾಪತ್ತೆಯಾಗಿದ್ದಾರೆ. ಪರಿಯಾಪಟ್ಟಣ ತಾಲೂಕಲ್ಲಿ ಈ ಘಟನೆ ನಡೆದಿದ್ದು, ಪೋಷಕರು ಕಂಗಾಲಾಗಿದ್ದಾರೆ.
![ಒಂದೇ ಗ್ರಾಮದ ಮೂವರು ಮಕ್ಕಳು ದಿಢೀರ್ ನಾಪತ್ತೆ: ಪೋಷಕರು ಕಂಗಾಲು](https://etvbharatimages.akamaized.net/etvbharat/prod-images/768-512-3434071-thumbnail-3x2-.jpg)
ನಾಪತ್ತೆಯಾದ ಮಕ್ಕಳು
ನಿನ್ನೆ ಸಂಜೆ ಶಾಲೆ ಮುಗಿಸಿದ ಬಳಿಕ ಮಕ್ಕಳು ಮನೆಗೆ ಹಿಂದಿರುಗದೇ ಬಸ್ ನಿಲ್ದಾಣದ ಬಳಿ ಇರುವ ಮೈದಾನದಲ್ಲಿ ಆಟವಾಡುತ್ತಿದ್ದರು. ಆಟದ ಮುಗಿಸಿ ಮನೆಗೆ ಬರದೆ ಆದಿತ್ಯ ಅರಸ್ (13), ಪ್ರದೀಪ್ (11) ಮತ್ತು ಪವನ್ (10) ಈ ಮೂವರು ವಿದ್ಯಾರ್ಥಿಗಳು ನಿನ್ನೆ ಸಂಜೆಯಿಂದಲೇ ನಾಪತ್ತೆಯಾಗಿದ್ದಾರೆ. ಇದರಿಂದ ಆತಂಕಗೊಂಡಿರುವ ಪೋಷಕರು ಬೆಟ್ಟದಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.