ಕರ್ನಾಟಕ

karnataka

ETV Bharat / briefs

ಮೆಡಿಕಲ್ ಶಾಪ್​ನಲ್ಲಿ ನಿಷೇಧಿತ ಮಾತ್ರೆ ಮಾರಾಟ: ಮೂವರ ಬಂಧನ - ನಿಷೇಧಿತ ಮತ್ತು ಬರುವ ಮಾತ್ರೆಗಳ ಮಾರಾಟ

ಬಾಲಾಜಿ ಮೆಡಿಕಲ್ ಶಾಪ್​ನಲ್ಲಿ ನಿಷೇಧಿತ ಮತ್ತು ಬರಿಸುವ ಮಾತ್ರೆಗಳನ್ನು ಮಾರಾಟ ಮಾಡುತ್ತಿದ್ದಾರೆ ಎಂಬ ದೂರಿನ ಹಿನ್ನೆಲೆಯಲ್ಲಿ ತಾಲೂಕು ಅಬಕಾರಿ ಅಧಿಕಾರಿಗಳು ದಾಳಿ ಮಾಡಿದ್ದು, ದಾಳಿ ವೇಳೆ ನಿಷೇಧಿತ ಮಾತ್ರೆಗಳು ದೊರಕಿವೆ.

arrest
arrest

By

Published : May 1, 2021, 9:39 PM IST

ಮೈಸೂರು: ಮತ್ತು ಬರಿಸುವ ನಿಷೇಧಿತ ಮಾತ್ರೆಗಳನ್ನು ಮಾರಾಟ ಮಾಡುತ್ತಿದ್ದ ಮೆಡಿಕಲ್‌ ಶಾಪ್ ಮೇಲೆ ಅಬಕಾರಿ ಅಧಿಕಾರಿಗಳು ದಾಳಿ ಮಾಡಿ ಮೂವರನ್ನು ಬಂಧಿಸಿರುವ ಘಟನೆ ಕೆ.ಆರ್.ನಗರ ಪಟ್ಟಣದಲ್ಲಿ ನಡೆದಿದೆ.

ಕೆ.ಆರ್. ನಗರ ಪಟ್ಟಣದ ಬಾಲಾಜಿ ಮೆಡಿಕಲ್ ಶಾಪ್​ನಲ್ಲಿ ನಿಷೇಧಿತ ಮತ್ತು ಬರುವ ಮಾತ್ರೆಗಳನ್ನು ಮಾರಾಟ ಮಾಡುತ್ತಿದ್ದಾರೆ ಎಂಬ ದೂರಿನ ಹಿನ್ನೆಲೆಯಲ್ಲಿ ತಾಲೂಕು ಅಬಕಾರಿ ಅಧಿಕಾರಿಗಳು ದಾಳಿ ಮಾಡಿದ್ದು, ದಾಳಿ ವೇಳೆ ನಿಷೇಧಿತ ಮಾತ್ರೆಗಳು ದೊರಕಿದ್ದು ಈ ಸಂಬಂಧ ಮೆಡಿಕಲ್ ಮಾಲೀಕ ಶಿವಕುಮಾರ್ ಈತನ ಜೊತೆಗೆ ಮಾರಾಟಕ್ಕೆ ಸಹಕರಿಸುತ್ತಿದ್ದ ಶ್ರೀಕಂಠ ಮತ್ತು ರಾಜೇಶ್ ಎಂಬುವರನ್ನು ಬಂಧಿಸಲಾಗಿದೆ.

ಅಬಕಾರಿ ಡಿಸಿ. ಡಾ.ಮಾಹಾದೇವಿ ಭಾಯಿ ನೇತೃತ್ವದಲ್ಲಿ ದಾಳಿ ನಡೆದಿದ್ದು, ಈ ಸಂಬಂಧ ಕೆ.ಆರ್.ನಗರ ಅಬಕಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

For All Latest Updates

ABOUT THE AUTHOR

...view details