ಪುಣೆ: ಶ್ವಾನ ಜನರ ಅಚ್ಚುಮೆಚ್ಚಿನ ಪ್ರಾಣಿ. ಅವು ಮಾಡುವ ಕೆಲಸ ಕೆಲವೊಮ್ಮೆ ಮಾಲೀಕರ ಮೆಚ್ಚುಗೆಗೆ ಪಾತ್ರವಾಗುತ್ತವೆ. ಇದರ ಮಧ್ಯೆ ಮಹಾರಾಷ್ಟ್ರದ ಪುಣೆಯಲ್ಲಿ ಮೂಕ ಪ್ರಾಣಿಯ ಕಾರ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಕೀರ್ತನೆಯಲ್ಲಿ ನಿತ್ಯವೂ ಪಾಲ್ಗೊಳ್ಳುವ ಶ್ವಾನ... ವಿಡಿಯೋ ನೋಡಿ ತಲೆಬಾಗಿದ ಭಕ್ತಗಣ! - ಮಹಾರಾಷ್ಟ್ರ
ಮಹಾರಾಷ್ಟ್ರದ ಪುಣೆಯ ದೇವಸ್ಥಾನವೊಂದರಲ್ಲಿ ನಡೆಯುವ ಕೀರ್ತನೆಯಲ್ಲಿ ನಿತ್ಯವೂ ಶ್ವಾನವೊಂದು ಪಾಲ್ಗೊಳ್ಳುವ ಮೂಲಕ ಎಲ್ಲರ ಗಮನ ಸೆಳೆದಿದೆ.
![ಕೀರ್ತನೆಯಲ್ಲಿ ನಿತ್ಯವೂ ಪಾಲ್ಗೊಳ್ಳುವ ಶ್ವಾನ... ವಿಡಿಯೋ ನೋಡಿ ತಲೆಬಾಗಿದ ಭಕ್ತಗಣ!](https://etvbharatimages.akamaized.net/etvbharat/images/768-512-2994224-thumbnail-3x2-dog.jpg)
ಕೀರ್ತನೆ ಹಾಡಿದ ಶ್ವಾನ
ಮಹಾರಾಷ್ಟ್ರದ ಪುಣೆಯ ದೇವಸ್ಥಾನವೊಂದರಲ್ಲಿ ನಡೆಯುವ ಕೀರ್ತನೆಯಲ್ಲಿ ಶ್ವಾನವೊಂದು ಭಾಗಿಯಾಗಿ ಎಲ್ಲರ ಗಮನ ಸೆಳೆಯುತ್ತಿದೆ. ಪ್ರತಿ ಗುರುವಾರ ಈ ದೇವಾಲಯದಲ್ಲಿ ಭಜನೆ-ಕೀರ್ತನೆ ನಡೆಯುತ್ತದೆ. ಶ್ವಾನ ಅದರಲ್ಲಿ ಚಾಚು ತಪ್ಪದೇ ಕೀರ್ತನೆಯಲ್ಲಿ ಪಾಲ್ಗೊಳ್ಳುತ್ತದೆ. ಇದೀಗ ಅದರ ವಿಡಿಯೋವೊಂದು ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಫೋಸ್ಟ್ ಆದ ಕೆಲ ಗಂಟೆಯಲ್ಲೇ 2 ಸಾವಿರ ರಿಟ್ವೀಟ್ ಹಾಗೂ 4.500 ಲೈಕ್ಸ್ ಬಂದಿವೆ.
ಮೂಕ ಶ್ವಾನ ಬೊಗಳುವ ರೀತಿಯಲ್ಲಿ ಕೀರ್ತನೆ ಹಾಡಿದ್ದು, ಅದಕ್ಕೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಎಲ್ಲರೂ ತಲೆದೂಗುತ್ತಿದ್ದಾರೆ.